ಜಗದೀಶ ಬ ಹಾದಿಮನಿ ಅವರ ಖಂಡ ಕಾವ್ಯ ಸಂಕಲನ-’ಪ್ರೇಮಮಯಿ’. ಕೃತಿಗೆ ಬೆನ್ನುಡಿ ಬರೆದ, ಲಲಿತಾ ಕೆ ಹೊಸಪ್ಯಾಟಿ’ ವಿವೇಕಯುತ ಪ್ರಜ್ಞೆಯಿಂದ ಕಾವ್ಯಕ್ಕೆ ತೇಜಸ್ಸು ತುಂಬುವವನು ಕವಿ, ಕಾರಣ, ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಸಮಷ್ಠಿಭಾವದ ಉತ್ಕಟ ಇಚ್ಛೆ. ಈ ಕಾರಣಕ್ಕೆ, ಕನ್ನಡದ ಕವಿ ಪುಂಗವರು ಕಾಲ ಕಾಲದಿಂದಲೂ ರಚನೆ ಮಾಡಿದ ಕಾವ್ಯದಿಂದಾಗಿ ದಾರ್ಶನಿಕ ಜ್ಞಾನಿಗಳು ಎಂಬುದನ್ನು ಸಾಬಿತುಪಡಿಸಿದರು. ಇಂತಹ ಸಾಂಸ್ಕೃತಿಕ ಕಾವ್ಯ ಪರಂಪರೆಗೆ ತೆರೆದುಕೊಂಡವರು ಜಗದೀಶ ಹಾದಿಮನಿ, ಅಧ್ಯಯನ-ಅಂತರನೋಟ ಎರಡೂ ಖಂಡ ಕಾವ್ಯದ ಲಕ್ಷಣವೆ. 'ಅಂದು ಪೌರ್ಣಿಮೆಯ ದಿನ' ಎಂದು ಪ್ರಾರಂಭಗೊಳ್ಳುವ ಈ ಖಂಡ ಕವಿತೆ ಹಲವಾರು ಪ್ರಸಾವನೆಯೊಂದಿಗೆ ಪುಟ ತೆರೆಯುತ್ತದೆ. ಗದ್ಯದ ವಾಚ್ಯತೆಯನ್ನು ನುಸುಳಿಸಿಕೊಡದೇ, ಉಪದೇಶದ ಗೊಡವೆಗೆ ಹೊಗದೇ, ಜ್ಞಾನದ ಸಾರಯುತ ಬದುಕಿನ ಹುಡುಕಾಟಕ್ಕಾಗಿಯೇ ಬುದ್ದ ಸಾಗಿದ್ದನ್ನು ಓದುವಾಗ ಜಗದೀಶ ಅವರ ರಚನಾ ಕೌಶಲ್ಯತೆ ಮೆಚ್ಚಿಕೆ ಬರುತ್ತದೆ.’ ಎಂದು ಪ್ರಶಂಸಿದ್ದಾರೆ.
ಲೇಖಕ ಜಗದೀಶ.ಬ.ಹಾದಿಮನಿ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಳಮಳ್ಳಿ ಗ್ರಾಮದವರು. ತಂದೆ ಬಸವಂತರಾಯ. ತಾಯಿ - ಧನಪೂರ್ಣ. ಬಾಗಲಕೋಟೆ ಜಿಲ್ಲೆಯ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ ಶಿಕ್ಷಣ, ಹುನಗುಂದದ ವ್ಹಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವ್ಹಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಿಯುಸಿ, ಹುನಗುಂದದ ಸರಕಾರಿ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಟಿ.ಸಿ.ಎಚ್ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಾಹ್ಯ ಅಭ್ಯರ್ಥಿಯಾಗಿ ಬಿ.ಎ ಪದವಿ, ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣದ ಮೂಲಕ ಕನ್ನಡದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದಾರೆ. ಕೃತಿಗಳು: ...
READ MORE