ಮುಗಿಲ ಸಂಚಲನ

Author : ಈರಪ್ಪ ಬಿಜಲಿ

Pages 80

₹ 100.00




Year of Publication: 2021
Published by: ಸೌಜನ್ಯ ಪ್ರಕಾಶನ
Address: ಭಾಗ್ಯನಗರ- 583238 , ಕೊಪ್ಪಳ

Synopsys

ಕವಿ ಈರಪ್ಪ ಬಿಜಿಲಿ ಅವರ ಕವನ ಸಂಕಲನ ‘ಮುಗಿಲ ಸಂಚಲನ’. ಈ ಕವನ ಸಂಕಲನದಲ್ಲಿ ಕವಿ ಗವಿಸಿದ್ದಪ್ಪ ಬಾರಕೇರ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಈರಪ್ಪ ಬಿಜಲಿಯವರ ಕವನಗಳು ಮಿಂಚಿನಂತೆ ಹೊಳೆದು, ತಾರೆಯಂತೆ ಮಿನುಗುತ್ತವೆ. ಕವನಗಳಲ್ಲಿ ಶಬ್ದ ಮಾಧುರ್ಯ ಬಹಳ ಸೊಗಸಾಗಿದೆ. ಮುತ್ತು ಹವಳ ಸೇರಿಸಿದರೆ ಬಂಗಾರದ ಸರವು ಚಂದ ಕಾಣುತ್ತದೆ. ಕನ್ನಡ ನೆಲಜಲ, ಭಾಷೆ ಸಂಸ್ಕೃತಿಯ ಬಗ್ಗೆ ಪ್ರೀತಿಯ ಬಗ್ಗೆ, ಸರಳ ಸುಂದರವಾಗಿ ನಾನಾ ರೂಪಗಳ, ವಿವಿಧ ವಿಷಯಗಳ ಕುರಿತು ಕವನ ಬರೆದಿರುವರು ಎಂಬುದಾಗಿ ಹೇಳಿದ್ದಾರೆ.

ಕೃತಿಯ ಪರಿವಿಡಿಯಲ್ಲಿ ಕಪ್ಪೆ ಚಿಪ್ಪಿನಲಿ ಬಚ್ಚಿಟ್ಟ ಪ್ರೀತಿ ನನದು, ಮುಚ್ಚದಿರಲಿ ಕನ್ನಡ ಶಾಲೆಗಳು, ದುಂಡು ಮಲ್ಲಿಗೆ, ಚಂದ್ರಮುಖಿ ಪ್ರಾಣಸಖಿ, ಅವರ್ಣನೀಯ ಅಪ್ಪ, ಮಲ್ಲಿಗೆಯ ಮದುರಂಗಿ, ಬೆಳದಿಂಗಳ ಚಂದಿರ, ಅನುರಾಗ, ದಿಗಂತ, ಆಕಾಶ ಗೂಡಿಗೆ ಮರಳಿದ ಪಕ್ಷಿಗಳು ಹೀಗೆ 64 ಕವನಗಳಿವೆ.

About the Author

ಈರಪ್ಪ ಬಿಜಲಿ

ಶಿಕ್ಷಣ ಕ್ಷೇತ್ರದಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 42 ವರ್ಷದ ಈರಪ್ಪ ಬಿಜಲಿ ವೃತ್ತಿಯಿಂದ ಶಿಕ್ಷಕರಾದರೂ ಪ್ರವೃತ್ತಿಯಿಂದ ಉತ್ತಮ ಸಾಹಿತಿಗಳಾದ ಇವರ ಜನ್ಮಭೂಮಿ ಮತ್ತು ಕರ್ಮಭೂಮಿಗಳೆರಡೂ ಕೊಪ್ಪಳ . ಸಾಹಿತ್ಯದಲ್ಲಿ ಇತ್ತೀಚೆಗೆ ಎರಡು ವರ್ಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡ ಬಿಜಲಿಯವರು, 2021ರಲ್ಲಿ ತಮ್ಮ ಚೊಚ್ಚಲ ಕೃತಿಗಳಾದ ಮುಗಿಲ ಸಂಚಲನ.( ಕವನ ಸಂಕಲನ). ಶ್ವೇತ ಹೃದಯ ( ಭಾವಗೀತೆಗಳ ಸಂಕಲನ) ಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕಾಣಿಕೆಯಾಗಿ ನೀಡಿ ಜನಪ್ರಿಯತೆ ಗಳಿಸಿದ್ದಾರೆ. ಬಿಜಲಿಯವರು ಸಾಹಿತ್ಯದ ಪ್ರಕಾರಗಳಾದ ಶಿಶುಗೀತೆ, ಗಝಲ್, ಮುಕ್ತಕಗಳು, ರುಬಾಯಿ, ಹೈಕುಗಳು, ಜಾನಪದ ತ್ರಿಪದಿಗಳು, ಭಾವಗೀತೆಗಳು,ಆಧುನಿಕ, ಛಂದೋಬದ್ಧ ...

READ MORE

Related Books