ಕವಿ ಸನಾವುಲ್ಲಾ ನವಿಲೇಹಾಳ್ ಅವರ ಮೊದಲ ಕವನ ಸಂಕಲನ- ಒಂಟಿ ಮರದ ಕೆಳಗೆ. ಇಲ್ಲಿಯ ಕವಿತೆಗಳಲ್ಲಿ ಮಾರ್ಮಿಕತೆ.ಬಂಡಾಯ.ಪ್ರೇಮ.ಪ್ರಣಯ,ಅವಮಾನ ಹಾಗೂ ಎಲ್ಲರೊಳಗೂ ಒಂದಾಗುವ ತುಡಿತಗಳಿವೆ. ಸಂಕಲನಕ್ಕೆ ಕರ್ನಾಟಕ ಸರ್ಕಾರದ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಲಭಿಸಿದೆ.
ಕೃತಿಗೆ ಬೆನ್ನುಡಿ ಬರೆದ ಖ್ಯಾತ ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರು ‘ನಮ್ಮ ಕಣ್ಣೆದುರಿನ ಸಮಾಜ. ಧರ್ಮ, ಪರಿಸರ, ಪ್ರೀತಿ ಹಾಗೂ ಭೀತಿ, ಪ್ರಕೃತಿ, ದೇವರು ಹೀಗೆ ವಿವಿಧ ಹೆಸರುಗಳಲ್ಲಿ ದೂರ ನಿಲ್ಲುವವರ ಹಾಗೂ ದೂರ ತಳ್ಳುವವರ ಹತ್ತಿರ ಸಾಗಿ ತಬ್ಬಿಕೊಳ್ಳ ಬಯಸುವ ಮಾನವೀಯ ಸಂವೇದನೆ, ಬಾಳದಾರಿಯಲ್ಲಿ ಬರೀ ನೆನಪಾಗಿ ಉಳಿದ ಹೃದಯ ವೇದನೆ ಹೀಗೆ ಇಲ್ಲಿಯ ಕಾವ್ಯಗಳಲ್ಲಿ ವಸ್ತು ವಿಸ್ತಾರವಿದೆ. ಹುಡುಕಾಟವಿದೆ. ಸಾಹಿತ್ಯದ ಓದುಹಾಗೂ ಸಮಾಜದ ಒಡನಾಟ, ಅದರೊಂದಿಗೆ ಹುಟ್ಟುವ ನಿರಾಶೆ, ನಿರೀಕ್ಷೆಇವೆಲ್ಲವನ್ನೂ ಕವನಗಳಲ್ಲಿ ಅಭಿವ್ಯಕ್ತಿಪಡಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ಕವಿ ಸನಾವುಲ್ಲಾ ನವಿಲೇಹಾಳ್ ಅವರು ಮೂಲತಃ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ನವಿಲೇಹಾಳ್ ಗ್ರಾಮದವರು. ಮಂಗಳೂರಿನ ಮುಸ್ಲಿಂ ಲೇಖಕರ ಸಂಘ ಕೊಡಮಾಡುವ ಮುಸ್ಲಿಂ ಲೇಖಕ ಪ್ರಶಸ್ತಿ ಲಭಿಸಿದೆ. ತನ್ನೂರಿನಲ್ಲಿ ಸ್ವಂತದ ಗ್ರಂಥಾಲಯವನ್ನು ತೆರೆದಿದ್ದು,ಕನ್ನಡ ಸಾಹಿತ್ಯ ಓದುಗರಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಓದಲು ಉಚಿತವಾಗಿ ಪುಸ್ತಕಗಳನ್ನು ಒದಗಿಸುತ್ತಿದ್ದಾರೆ. ಕೃತಿಗಳು: ಒಂಟಿ ಮರದ ಕೆಳಗೆ (ಕವನ ಸಂಕಲನ) ...
READ MORE