‘ಹಸಿವು ಮತ್ತು ತಲ್ಲಣಗಳ ನದಿ’ ಕೃತಿಯು ಅಕ್ಬರ್ ಸಿ. ಕಾಲಿಮಿರ್ಚಿ ಅವರ ಕವನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಕವಿ ಮತ್ತು ಕವಿತೆಗಳ ಮೂಲ ಧಾತು ಏನು ಎಂಬ ಪ್ರಶ್ನೆ ಯಾವತ್ತೂ ನಿರುತ್ತರ. ಒಬ್ಬ ಕವಿ-ಲೇಖಕ ಯಾಕೆ ಬರೆಯುತ್ತಾನೆ? ಏನದರ ತುರ್ತು ಎಂಬ ಪ್ರಶ್ನೆಗಳೆಲ್ಲ ಶತಶತಮಾನಗಳಿಂದ ಕಾಡುತ್ತಲೇ ಬಂದು ಸುದೀರ್ಘ ಚರ್ಚೆಯ ಪುಟಗಳಲ್ಲಿ ಮಾತುಗಳಲ್ಲಿ ಸೇರಿಕೊಂಡಿವೆ. ಪ್ರೇಮ, ವಿಷಾದ, ಭಗ್ನತೆ, ಖಿನ್ನತೆ, ರೋಮಾಂಚನ, ಸುಖ ಸುಪ್ಪತ್ತಿಗೆ, ವಿರಾಮದ ಸಖ್ಯ, ಬಡತನ, ಹಸಿವು, ರೋದನ ಏನು ಯಾವುದು ಇದರ ಮೂಲ ಸ್ರೋತ? ಅರಿದಿವಿಗೆ ದಕ್ಕದ ಜಿಜ್ಞಾಸೆಯೇ ಸರಿ. ಬಂಜೆಯಾದ ನೆಲಕೆ ಹಸಿರೆಂಬುದೆಯಿಲ್ಲ ಹುಡಿಮಣ್ಣು ಬೆಚ್ಚನೆಯ ಹವಾ ಕೆರೆಕಟ್ಟೆ ತುಂಬಿ ಊರೇ ತೋಯುವ ನೀರು ನಾಲಿಗೆಯ ಗುಟುಕಿಗೂ ಹನಿಯಿಲ್ಲ’ (ಬಸಿರು ಕಾಣಲಿ ಭೂಮಿ) ಎಂಬ ಸಾಲುಗಳು ಕೇವಲ ಮನುಷ್ಯ ಬದುಕಿನ ದಾರುಣತೆಯನ್ನು ಮಾತ್ರ ಹೇಳದೆ ಇದಕ್ಕೆ ಕಾರಣವಾದ ನಿಸರ್ಗದ ಅಸಮರ್ಪಕ ಸ್ವರೂಪವನ್ನು ಹೇಳುತ್ತವೆ. ಇಲ್ಲಿ ನಾವು ಗಮನಿಸಬೇಕಾದ ಸಂಗತಿ ಎಂದರೆ, ಒಬ್ಬ ಕವಿಯ ಬಾಳು ಮತ್ತು ಬರಹದ ಅಭಿವ್ಯಕ್ತಿಗೆ ಅಲ್ಲಿನ ಭೌಗೋಳಿಕ ಸ್ವರೂಪ ಕೂಡಾ ಹೇಗೆ ಕಾರಣ ಆಗಬಹುದು ಎಂಬುದನ್ನು ಗಮನಿಸಲೇಬೇಕು. ಕವಿಯ ರಚನೆ ಮತ್ತು ಅಲ್ಲಿನ ಭೂ ಪರಿಸರ ಹೇಗೆ ಪರಸ್ಪರ ಒಳ ಸಂಯೋಜಕ ಸಂಬಂಧವನ್ನು ಹೊಂದಿದೆ ಎಂಬುದಕ್ಕೆ ಈ ಸಂಕಲನದಲ್ಲಿ ಅನೇಕ ಪದ್ಯಗಳ ನಿದರ್ಶನ ಇದೆ ಎಂದು ವಿಶ್ಲೇಷಿಸಲಾಗಿದೆ.
ಲೇಖಕ ಅಕ್ಬರ್ ಸಿ. ಕಾಲಿಮಿರ್ಚಿ ಮೂಲತಃ ಕೊಪ್ಪಳ ಜಿಲ್ಲೆಯ ಮಂಗಳೂರು ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನ ಹುಟ್ಟೂರಿನಲ್ಲಿ, ನಂತರ ಬೆಂಗಳೂರಿನಲ್ಲಿ ಡಿಪ್ಲೋಮಾ, ರಾಮನಗರ ಜಿಲ್ಲೆಯಲ್ಲಿ ಔಷದ ವಿಜ್ಞಾನ ಪದವಿ ಪಡೆದರು. ಕಾವ್ಯ, ಮಕ್ಕಳ ಕವಿತೆ, ಕತೆ, ಜೀವನ ಚರಿತ್ರೆ, ಲೇಖನ, ಸಂಪಾದನೆ, ಕಥಾ ಸಂಕಲನ ಸೇರಿ 23 ಕೃತಿಗಳನ್ನು ರಚಿಸಿದ್ದಾರೆ. ಕೃತಿಗಳು: ಆಶಯ, ಕಾಚಕ್ಕಿ, ಅಮಲ, ಕತ್ತಲೆಯ ಪ್ರೀತಿಗೆ, ಗಾಳಿ ಜೋಗುಳ, ಒಡಲ ಉರಿಯ ನೆನೆದು, ಬಂದೂಕಿಗೆ ಜೀವನವಿಲ್ಲ( ಕವನ ಸಂಕಲನಗಳು). ಬಾಪು ಪಾಪು, ರೈಲು ಗಾಡಿ, ಪುಟ್ಟಿಯ ಆಸೆ (ಮಕ್ಕಳ ಕವನ ಸಂಕಲನಗಳು), ಸಿದ್ಧಿಪುರುಷ ...
READ MORE