ಕಿರಂ ಹೊಸ ಕವಿತೆ- 2019

Author : ಜಯಶಂಕರ ಹಲಗೂರು

Pages 224

₹ 220.00




Year of Publication: 2019
Published by: ಸಂಸ ಪ್ರಕಾಶನ
Address: ನಂ.10, 13ನೇ ಮುಖ್ಯರಸ್ತೆ, 4ನೇ ಬ್ಲಾಕ್, ನಂದಿನಿ ಬಡಾವಣೆ, ಬೆಂಗಳೂರು- 560096
Phone: 9742067427

Synopsys

‘ಕಿರಂ ಹೊಸ ಕವಿತೆ- 2019’ ಕಿ.ರಂ. ನಾಗರಾಜ್ ಅವರ ನೆನಪಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಯುವ ಕವಿಗಳು ರಚಿಸಿದ ಕವಿತೆಗಳ ಸಂಕಲನ. ಡಾ. ಜಯಶಂಕರ ಹಲಗೂರು ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಕಾವ್ಯದ ಕಡುವ್ಯಾಮೋಹಿ ಆಗಿದ್ದ ಕಿರಂ ಅವರಿಗೆ ಕಾವ್ಯದ ಮೂಲಕವೇ ಜಗತ್ತಿನ ಎಲ್ಲವನ್ನೂ ಎಟುಕಿಸಿಕೊಳ್ಳಬಲ್ಲೆ, ಅರ್ಥೈಸಬಲ್ಲೆ, ವ್ಯಾಖ್ಯಾನಿಸಬಲ್ಲೆ ಎಂಬ ದೃಢವಾದ ವಿಶ್ವಾಸವಿತ್ತು. ನಮ್ಮ ಆಲೋಚನೆ, ವರ್ತನೆಯ ನಾಡಿ ಹಿಡಿಯಬಲ್ಲ ದಿವ್ಯಶಕ್ತಿ ಕಾವ್ಯ ಮಾತ್ರ; ಉಳಿದೆಲ್ಲ ಜ್ಞಾನಶಿಸ್ತುಗಳು ಮತ್ತು ಅವುಗಳ ವಿಸ್ತಾರವಾದ ಬೆಳವಣಿಗೆಗಳು ನಮ್ಮ ಬಹಿರಂಗದ ಬಾಳಿನ ಪೂರಕವಾದ ಧಾತುಗಳು ಎಂಬುದನ್ನು ಕಿ.ರಂ. ಅವರು ಕಂಡುಕೊಂಡಿದ್ದರು. ಇದರಿಂದಾಗಿಯೇ ಅವರ ಕಾವ್ಯಾನುಸಂಧಾನಗಳು ಕೇವಲ ಮಾಹಿತಿ ಪ್ರಧಾನವಾದ ಭಾಷಣಗಳಾಗದೆ ಮಹಾ ಅರಿವಿನ ಸ್ಪೋಟಗಳೇ ಆಗಿದ್ದವು. ಶೈಕ್ಷಣಿಕ ವಾತಾವರಣದ ತರಗತಿಗಳೇ ಆಗಿರಲಿ, ಹೊರಗಿನ ಕ್ಷಣಗಳೇ ಆಗಿರಲಿ ಹಾಗೂ ಮಠೀಯ ಆವರಣಗಳೇ ಆಗಿರಲಿ ಕಿ.ರಂ. ಅವರು ಮೇಲೆ ಉಲ್ಲೇಖಿಸಿದ ಕಾವ್ಯದ ಪಾರಂಪರಿಕ ಮೌಲ್ಯವನ್ನು ಕೇಳುಗರಿಗೆ ದಾಟಿಸುತ್ತಿದ್ದರು. ಪಂಪನ ಕಾವ್ಯವನ್ನು ಹೊಕ್ಕಿ ನಮ್ಮ ಕಾಲದ ಯುದ್ಧೋನ್ಮಾದವನ್ನು, ಕುಮಾರವ್ಯಾಸನ ಕಾವ್ಯದ ಮೂಲಕ ಇವತ್ತಿನ ರಾಜಕಾರಣವನ್ನು ಸಂಧಿಸಿಬಿಡುತ್ತಿದ್ದರು, ಹೊಸ ಬಗೆಯ ಒಳನೋಟಗಳು ಧುತ್ತನೆ ಹೊಮ್ಮುವಂತೆ ವ್ಯಾಖ್ಯಾನಿಸಿಬಿಡುತ್ತಿದ್ದರು. ಇಡೀ ವಿಶ್ವವನ್ನು ಕಾವ್ಯದೊಡನೆ ಬೆಸೆಯುತ್ತಿದ್ದ ಅವರ ಕಾವ್ಯಾನುಸಂಧಾನದ ಪರಿ ಪವಾಡದಂತೆ ಕಾಣುತ್ತಿತ್ತು. ಅಂತಹ ಕಿರಂ ನೆನಪಿನಲ್ಲಿ ಪ್ರತಿವರ್ಷ ನಡೆಯುವ ಕಾವ್ಯೋತ್ಸವವನ್ನು ದಾಖಲಿಸುವ ಸಲುವಾಗಿ ಹೊಸತಲೆಮಾರಿನ ಕವಿತೆಗಳನ್ನು ಸಂಪಾದಿಸಿ ಕೃತಿಯನ್ನು ಪ್ರಕಟಿಸಿದ್ದಾರೆ. 

About the Author

ಜಯಶಂಕರ ಹಲಗೂರು

ಡಾ. ಜಯಶಂಕರ ಹಲಗೂರು ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರಿನವರು. 'ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಕೋಮುವಾದದ ಪ್ರತಿನಿಧೀಕರಣ' ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ. ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿರುವ ಇವರು ಹೊಸ ತಲೆಮಾರಿನ ಕವಿ ಮತ್ತು ಸಾಹಿತ್ಯ ವಿಮರ್ಶಕ. ...

READ MORE

Related Books