ಕವಯತ್ರಿ ಸಂಧ್ಯಾದೇವಿ ಅವರ ಮೂರನೇ ಕವನ ಸಂಕಲನ-’ಝಳಕ್ಕೂ ಮುಖ ಬೆಳಗುತ್ತದೆ’. ಇಲ್ಲಿಯ ಬಹುತೇಕ ಕವನಗಳು ಪ್ರತಿಕೆಗಳಲ್ಲಿ ಪ್ರಕಟವಾದವು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಕೃತಿಯ ಮುನ್ನುಡಿಯಲ್ಲಿ ’ ಹೆಚ್ಚು ಮಾತಿಲ್ಲದೇ, ಆದರೆ, ತನಗೆ ತಾನೇ ಮಾತನಾಡಿಕೊಳ್ಳುತ್ತಿರುವಂತೆ ಇಲ್ಲಿಯ ಕವಿತೆಗಳ ರಚನೆ ಇದೆ. ಇಲ್ಲಿಯ ಬಹುತೇಕ ಕವಿತೆಗಳ ಸ್ಥಾಯಿಭಾವ ’ಅನುರಾಗ’ ಆಗಿದೆ. ಏಕೆಂದರೆ, ಅನುರಾಗದ ಅಂಚಿನಲ್ಲಿ ವೈರಾಗ್ಯ ಇಣುಕುತ್ತಿರುತ್ತದೆ. ಅಹಂ ಅಲ್ಲ’ ಎಂದು ಪ್ರಶಂಸಿಸಿದ್ದಾರೆ. ಬೆಂಕಿಯಲ್ಲಿ ಅರಳುವ ಹೂವು-ಚಿನ್ನ. ಈ ಚಿನ್ನದ ಝಳಕ್ಕೆ ಮುಖ ಬೆಳೆಗುತ್ತದೆ. ಆದರೆ, ಇಲ್ಲಿ ಗಮನಿಸಬೇಕಾದದ್ದು, ಬೆಳಗುವುದು ಅವಳ ಮುಖ ಮಾತ್ರವಲ್ಲ; ಇಬ್ಬರದ್ದುಎಂದು ಅರ್ಥೈಸಿದ್ದಾರೆ.
ಕವಯಿತ್ರಿ ಸಂಧ್ಯಾದೇವಿ ಮೂಲತಃ ಪುತ್ತೂರಿನವರು. `ಮಾತು ಚಿಟ್ಟೆ, ಬೆಂಕಿ ಬೆರಳು, ಮುರಿದ ಮುಳ್ಳಿನಂತೆ ಜ್ಞಾನ' ಅವರ ಮೊದಲ ಕವನ ಸಂಕಲನ. ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಹಲವಾರು ಕವಿತೆಗಳು ಮಯೂರ, ಸುಧಾ, ಹೊಸ ಮನುಷ್ಯ ಮುಂತಾದ ಮಾಸಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಝಳಕ್ಕೆ ಮುಖ ಬೆಳಗುತ್ತದೆ ಮತ್ತು ‘ನೆನಪಿನ ಬೂದಿಗೆ ಜೀವ ಬರಲಿ’ ಅವರ ಮತ್ತೆರಡು ಕವನ ಸಂಕಲನ. ...
READ MORE