ಮಾಗಿಯ ಕೋಗಿಲೆ

Author : ಸುಬ್ರಾಯ ಚೊಕ್ಕಾಡಿ

Pages 70

₹ 46.00




Year of Publication: 2004
Published by: ಮೌಲ್ಯ ಪ್ರಕಾಶನ
Address: ನಲ್ಲೂರು-574502, ಕಾರ್ಕಳ ತಾಲೂಕು, ಜಿಲ್ಲೆ ಉಡುಪಿ.
Phone: 9880128871

Synopsys

‘ಮಾಗಿಯ ಕೋಗಿಲೆ’ ಸುಬ್ರಾಯ ಚೊಕ್ಕಾಡಿ ಅವರ ರಚನೆಯ ಕವನಸಂಕಲನವಾಗಿದೆ. ಬೆಳೆಯ ಸಿರಿ ಮೊಳಕೆಯಲ್ಲೆಂಬಂತೆ ಛಲ ಹಾಗೂ ಧೈರ್ಯ ವನ್ನಾಗಲೇ ರೂಢಿಸಿಕೊಂಡ ಈ ಬಳಗದ ಗೆಳೆಯರು ಸ್ವತಃ ಸಾಹಿತ್ಯ ಪ್ರೇಮಿಗಳು ಮಾತ್ರವಲ್ಲದೆ ಪತ್ರಿಕೆಗಳಲ್ಲೂ ಬರಹಗಾರರು. ಇಂಥ ಪ್ರಕಾಶನದ ಮೊದಲ ಕುಸುಮ ವಾಗಿ ನಾಡಿನ ಹಿರಿಯ ಕವಿ-ವಿಮರ್ಶಕ ಶ್ರೀ ಸುಬ್ರಾಯ ಚೊಕ್ಕಾಡಿ ಅವರ ಈ ಕವನ ಸಂಕಲನ ಪ್ರಕಟವಾಗಿದೆ.

About the Author

ಸುಬ್ರಾಯ ಚೊಕ್ಕಾಡಿ
(29 June 1940)

ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು  ಹುಟ್ಟಿದ್ದು 29-06-1940 ರಂದು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ. ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯ, ತಾಯಿ ಸುಬ್ಬಮ್ಮ. ಪ್ರಾಥಮಿಕ ಶಿಕ್ಷಣ ಚೊಕ್ಕಾಡಿ. ಹೈಸ್ಕೂಲು ಓದಿದ್ದು ಪಂಜದಲ್ಲಿ  ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಎಂ.ಎ. (ಕನ್ನಡ) ಪದವಿ. ತಂದೆ ಯಕ್ಷಗಾನ ಕವಿ, ಭಾಗವತರಾದುದರಿಂದ ಕಿವಿಗೆ ಬೀಳುತ್ತಿದ್ದ ಲಯಬದ್ಧ ಹಾಡುಗಳು, ಹೈಸ್ಕೂಲಿಗೆ ನಡೆದು ಹೋಗುವಾಗ ಕಾಡಿನ ಮಧ್ಯೆ ಕೇಳುತ್ತಿದ್ದ ನೀರಿನ ಝುಳು ಝುಳು ನಾದ, ಹಕ್ಕಿಗಳ ಕೂಗು, ಮರಗಳ ಮರ್ಮರತೆಯಿಂದ ಪ್ರಭಾವಿತರಾಗಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಕವನ ಕಟ್ಟುವ ಕಾಯಕ ಪ್ರಾರಂಭ. ಉದ್ಯೋಗಕ್ಕಾಗಿ ...

READ MORE

Reviews

ಹೊಸತು - ಮಾರ್ಚ್ -2005

ಸಿಂಹದ ಮರಿ ಸೈನ್ಯದಂತೆ ಕೆಲವು ಎಳೆಯ ಗೆಳೆಯರು ಸೇರಿಕೊಂಡು ಹೊಸ ಪ್ರಕಾಶನವನ್ನು ಪ್ರಾರಂಭಿಸಿ ಎರಡು ಪುಸ್ತಕಗಳನ್ನಾಗಲೇ ಪ್ರಕಟಿಸಿ ಓದುಗರ ಮುಂದಿಟ್ಟಿದ್ದಾರೆ. ಬೆಳೆಯ ಸಿರಿ ಮೊಳಕೆಯಲ್ಲೆಂಬಂತೆ ಛಲ ಹಾಗೂ ಧೈರ್ಯ ವನ್ನಾಗಲೇ ರೂಢಿಸಿಕೊಂಡ ಈ ಬಳಗದ ಗೆಳೆಯರು ಸ್ವತಃ ಸಾಹಿತ್ಯ ಪ್ರೇಮಿಗಳು ಮಾತ್ರವಲ್ಲದೆ ಪತ್ರಿಕೆಗಳಲ್ಲೂ ಬರಹಗಾರರು. ಇಂಥ ಪ್ರಕಾಶನದ ಮೊದಲ ಕುಸುಮ ವಾಗಿ ನಾಡಿನ ಹಿರಿಯ ಕವಿ-ವಿಮರ್ಶಕ ಶ್ರೀ ಸುಬ್ರಾಯ ಚೊಕ್ಕಾಡಿ ಅವರ ಈ ಕವನ ಸಂಕಲನ ಪ್ರಕಟವಾಗಿದೆ. ಕನ್ನಡ ಸಾಹಿತ್ಯವು ನವ್ಯದಿಂದ ನವೋತ್ತರ ಕಾಲವೆಂದು ಗುರುತಿಸಲ್ಪಟ್ಟ ಸಂದರ್ಭದಲ್ಲಿ ಪ್ರಸಿದ್ಧಿಗೆ ಬಂದ ಶ್ರೀ ಚೊಕ್ಕಾಡಿಯವರ ಒ೦ಬತ್ತನೇ ಕವಿತಾ ಸಂಗ್ರಹದಲ್ಲಿ ಒಟ್ಟು ಐವತ್ತೆರಡು ಕವಿತೆಗಳಿವೆ. ಪರಂಪರೆಯ ಸಾಹಿತ್ಯದ ಮೌಲ್ಯವನ್ನೂ ಉಳಿಸಿಕೊಂಡು ಹೊಸತನವನ್ನೂ ರೂಢಿಸಿಕೊಂಡು ಸಾಗುವ ಹೊಸ ಕಾವ್ಯದೃಷ್ಟಿಯನ್ನಿಲ್ಲಿ ಕಾಣಬಹುದು.

Related Books