ಭಾವ ಭಾಗೀರಥಿ

Author : ದೊಡ್ಡರಂಗೇಗೌಡ

Pages 369

₹ 185.00




Year of Publication: 1994
Published by: ಅಭಿಜಾತ ಪ್ರಕಾಶನ
Address: ‘ಅಭಿಜಾತ ನಿಲಯ’, ಅತ್ತಿಕಟ್ಟೆ ಅಂಚೆ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ-572225
Phone: 9141277670

Synopsys

ದೊಡ್ಡ ರಂಗೇಗೌಡರ ಭಾವಗೀತೆಗಳ ಸಂಕಲನ-ಭಾವ ಭಾಗೀರಥಿ. ಕೃತಿ ಆರಂಭಕ್ಕೆ ತಮ್ಮ ಮಾತುಗಳನ್ನು ಬರೆದ ದೊಡ್ಡ ರಂಗೇಗೌಡರು ’ನಿತ್ಯ ನಿತ್ಯವೂ ಹೊಸದಾಗಿ ಕಾಣುವ ಹಸಿರಿಗೆ ಸ್ಪಂದಿಸಿದ್ದೇನೆ. ಹೂವಿನ ಸೌಂದರ್ಯಕ್ಕೆ ಸಂಪೂರ್ಣ ಮನಸೋತಿದ್ದೇನೆ. ಬೆಟ್ಟಗುಡ್ಡಗಳಲ್ಲಿ ಅಲೆಯುವಾಗ, ಬನಗಳಲ್ಲಿ ಅಲೆಮಾರಿಯಂತೆ ಸುತ್ತಾಡುವಾಗ ಎಂಥದೋ ಅವರ್ಣನೀಯ ಸಂತೋಷ ನನಗೆ ಸಿಕ್ಕಿದೆ...ಹರಿಯುವ ತೊರೆ, ಉಕ್ಕುವ ಕಡಲು, ಮೋಡಗಳ ಅಪಾರ ನಾಟ್ಯಮಯ ರೂಪಾಂತರಗಳು ಇವೆಲ್ಲವೂ ಪರವಶನನ್ನಾಗಿ ಮಾಡಿವೆ. ಖುಷಿಯಿಂದ ಓತಪ್ರೋತನಾಗಿ ಹಾಡಿದ್ದೇನೆ. ಉನ್ಮಾದಿತನಾಗಿ ಹೊಸ ಹೊಸ ಹಾಡುಗಳನ್ನು ಕಟ್ಟಿ ಹಾಡಿದ್ದೇನೆ. ಇದು ಅಗಣಿತ ರಾಗಸ್ಫುರಣೆಗೆ ಅನುವಾಗಿದೆ. ಆಗ ಸ್ವರ ಸಂಯೋಜಿಸಿದ ಅನೇಕ ಗೀತೆಗಳಿವೆ’ ಎಂದು ಇಲ್ಲಿಯ ಗೀತೆಗಳು ಹುಟ್ಟಿದ ಬಗೆಯನ್ನು ಕಾವ್ಯಾತ್ಮಕವಾಗಿ ಹೇಳಿದ್ದಾರೆ. ಈ ಸಂಕಲನದಲ್ಲಿ 335 ಕವನಗಳಿವೆ.

About the Author

ದೊಡ್ಡರಂಗೇಗೌಡ
(07 February 1946)

ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ.  ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್‌.ಎಲ್‌.ಎನ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ...

READ MORE

Related Books