ಈ ಕೃತಿಯಲ್ಲಿ ವಾಸ್ತವದ ಎಚ್ಚರದಲ್ಲಿ ಸಂಬಂಧ ಸೂಕ್ಷ್ಮತೆಗಳನ್ನು ವಿವರಿಸಿ, ವಿಮರ್ಶಿಸಲಾಗಿದೆ. ಹಾಗೆಯೇ ಮಾಗುತ್ತ ನಡೆದ ಕವಯತ್ರಿಯ ದನಿ ’ಆಲಿಕಲ್ಲ ನಡುವೆ ಉರಿವ ಆತ್ಮದ ಅಗ್ನಿ’ ಎನ್ನುವ ದಿಟ್ಟ ನಿಲುವಿನ ವಿಚಾರ ಕ್ರಾಂತಿಯೂ ಇದೆ. ಮಲ್ಲಿಕಾ ಅವರ ಮಾತಿನಲ್ಲಿ ಹೇಳುವುದಾದರೆ ಅದು ’ಶಬ್ದ ಮುಗ್ಧ ಶಿವಜ್ಞಾನ. ಕವಯಿತ್ರಿಯ ಮೂರು ನಾಲ್ಕು ದಶಕಗಳ ಬಾಳಯಾನವೆಂದರೆ ಅದು ಅವರ ಹೆಜ್ಜೆ ದಣಿವಿನ ಕಥನವಲ್ಲ. ತನ್ನ ಸುತ್ತಲಿನ ಜೀವಸಂಕುಲಗಳ ಜೊತೆ, ಸಂಪಾದಿಸಿದ ಸಂಕಥನಗೊಳಿಸಿದ ಬದುಕಿನ ಯಾನ. ’ಕಾಮನಬಿಲ್ಲು ಬೆಳಕಲ್ಲ’ ಎಂದು ಹೇಳುವ ಕವಯತ್ರಿ ಮಲ್ಲಿಕಾ ಘಂಟಿಯವರ ಈ ಮಾತು ಅವರ ಅನುಭವ ಲೋಕದ ರೂಪಕ ವಿವೇಕ. ಇಂತಹ ಹಲವು ರೂಪಕಗಳನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಲೇಖಕಿ ಮಲ್ಲಿಕಾ ಘಂಟಿಯವರು ಏಪ್ರಿಲ್ 17, 1959ರಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಅಗಸಬಾಳದಲ್ಲಿ ಜನಿಸಿದರು. ತಂದೆ ಶಂಕರಪ್ಪ ತಾಯಿ ಪಾರ್ವತಿ ಬಾಯಿ. ಪ್ರಾಥಮಿಕ ವಿದ್ಯಾಭ್ಯಾಸ ಹಂಗರಗಿ ಗ್ರಾಮ ಮತ್ತು ಬಾದಾಮಿಯಲ್ಲಿ ಪಡೆದ ಅವರು ವೀರ ಪುಲಿಕೇಶಿ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಮತ್ತು ಪಿ.ಯು ವರೆಗೆ ವಿದ್ಯಾಭ್ಯಾಸ ಮಾಡಿದರು. ಬಾಗಲಕೋಟೆ ಮತ್ತು ಜಮಖಂಡಿ ಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಬಿ.ಎ.ಪದವಿ. ಧಾರವಾಡದ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ ಕುರಿತು ಬರೆದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಬಿ ಎ, ಎಂ ...
READ MORE