ಕವಯತ್ರಿ ಕವಿತಾ ಗೋಪಿಕುಂಟೆ ಅವರ ಕವನ ಸಂಕಲನ-ಮೂಕ ರಾಗ. ಪ್ರತಿ ಕವಿತೆಯು ವಸ್ತು ವೈವಿಧ್ಯತೆಯಿಂದ ಕೂಡಿದೆ. ನಿರೂಪಣಾ ಶೈಲಿಯೂ ಆಕರ್ಷಕ ಹಾಗೂ ಪರಿಣಾಮಕಾರಿಯಾಗಿದೆ. ಚೊಚ್ಚಲ ಕವನ ಸಂಕಲನವಾದರೂ ಅವರ ಕಾವ್ಯಾಭಿವ್ಯಕ್ತಿಯಲ್ಲಿ ಪ್ರಬುದ್ಧತೆ ಇದೆ. ಚಿಂತನೆಗಳು ಪ್ರಖರವಾಗಿವೆ. ನವಿರಾದ ಭಾವಗಳಿಂದ ತುಂಬಿವೆ.
ಕವಯತ್ರಿ ಕವಿತಾ ಗೋಪಿಕುಂಟೆ ಅವರು ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಗೋಪಿಕುಂಟೆ ಗ್ರಾಮದವರು. ತಂದೆ ನಾಗರಾಜು ಜಿ ಎಸ್ ಮತ್ತು ತಾಯಿ ನಾಗಮ್ಮ. ಎಂಜಿನಿಯರಿಂಗ್ ಪದವೀಧರೆ. ಐಟಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಬರಹಗಾರರು. ಇವರ ಕವಿತೆಗಳು, ಬರಹಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು: ಮೂಕರಾಗ (ಕವನ ಸಂಕಲನ) ...
READ MORE