‘ವೈಶಾಖದ ಹಾಯಿಕುಗಳು’ ಲೇಖಕ ಶಂಭುಲಿಂಗ ವಾಲ್ದೊಡ್ಡಿ ಅವರ ಹಾಯಿಕುಗಳ ಸಂಕಲನ. ಈ ಸಂಕಲನಕ್ಕೆ ಡಾ.ಗವಿಸಿದ್ದಪ್ಪ ಎಚ್.ಪಾಟೀಲ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಹಾಯಿಕು ಜಪಾನಿನ ಕಾವ್ಯ ಪ್ರಕಾರ. ಇದನ್ನು ಕನ್ನಡ ಕವಿಗಳು ಇಂದು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅಂತವರಲ್ಲಿ ಶ್ರೀ ಶಂಭುಲಿಂಗ ವಾಲ್ದೊಡ್ಡಿಯೊಬ್ಬರು. ಮೂಲತಃ ವೃತ್ತಿಯಿಂದ ಶಿಕ್ಷಕರಾಗಿ, ಮುಖ್ಯ ಗುರುಗಳಾಗಿ, ರಾಷ್ಟ್ರ, ಅಂತಾರಾಷ್ಟ್ರೀಯ ಕಲಾವಿದರು. ಇದರೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗ ಮಾಡಿದ ಕವಿ, ಲೇಖಕ. ಈಗಾಗಲೇ ಹೊಂಗನಸಿನ ಹಾಯಿಕು 296, ಹೊಸ ದಿಗಂತದ ಹಾಯಿಕುಗಳು 451 ಮತ್ತು ವೈಶಾಖದ ಹಾಯಿಕುಗಳು 275 ಇಲ್ಲಿಯವರೆಗೆ ಒಟ್ಟು ಒಂದು ಸಾವಿರದ ಇಪ್ಪತ್ತೆರಡು ಹಾಯಿಕುಗಳು ಕನ್ನಡದಲ್ಲಿ ರಚಿಸಿದ ಏಕೈಕ ಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಹಾಯಿಕುಗಳು ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಿವೆ. ವಸ್ತು ವೈವಿಧ್ಯತೆ, ಶಾಂತಿ, ಪ್ರೇಮ, ಸೌಹಾರ್ದತೆ, ಸಹಬಾಳ್ವೆ, ಸಹೋದರತೆ, ಮಾನವೀಯತೆ ಪ್ರತಿಪಾದಿಸುವ ಹಾಯಿಕು ಕೊಟ್ಟ ಶಂಭುಲಿಂಗ ವಾಲ್ದೊಡ್ಡಿಯವರು ಕನ್ನಡ ಕಾವ್ಯ ಪ್ರೇಮಿಗಳ ಹೃದಯ ಕಲಕಿದ್ದಾರೆ ಎಂದು ಗವಿಸಿದ್ದಪ್ಪ ಎಚ್.ಪಾಟೀಲ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಶಂಭುಲಿಂಗ ವಾಗ್ದೊಡ್ಡಿ ಅವರು ಮೂಲತಃ ಬೀದರ ಜಿಲ್ಲೆಯ ವಾಗ್ದೊಡ್ಡಿ ಯವರು. ಲೇಖಕರು, ಜಾನಪದ ಕಲಾವಿದರು, ಗಾಯಕರು, ಬೀದರಿನ ವಿದ್ಯಾನಗರದ ಸಮತಾ ಪ್ರೌಢ ಶಾಲೆಯ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕೃತಿಗಳು: ಹೊಸ ದಿಗಂತದ ಹಾಯಿಕುಗಳು, ಮಹಾತಾಯಿ (ಜೀವನ ಚಿತ್ರ), ಮಮತೆಯ ಮಂದರ (ವಿಮರ್ಶಾ ಲೇಖನಗಳ ಸಂಕಲನ) ಪ್ರಶಸ್ತಿ-ಪುರಸ್ಕಾರಗಳು: ಅವರ ಜಾನಪದ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಕರ್ನಾಟಕ ಜಾನಪದ ಪರಿಷತ್ತಿನಿಂದ 'ಜಾನಪದ ಲೋಕ ಪ್ರಶಸ್ತಿ' ಹಾಗೂ 2008-2009 ನೇ ಸಾಲಿನ 'ರಾಷ್ಟ್ರೀಯ ಉತ್ತಮ ಶಿಕ್ಷಕ' ಪ್ರಶಸ್ತಿ ಲಭಿಸಿದೆ. ...
READ MORE