ಅವ್ವ

Author : ಪದ್ಮಿನಿ ನಾಗರಾಜ್ ಎಸ್.ಪಿ.

₹ 75.00




Year of Publication: 2020
Published by: ನಿರಂಕುಶ ಪ್ರಕಾಶನ
Address: ನಂ.83, 1ನೇ ಫ್ಲೋರ್, ಡಿ ಬ್ಲಾಕ್, ಗುಂಡೂರಾವ್ ಬಿಲ್ಡಿಂಗ್, ಅಗ್ರಹಾರ ದಾಸರಹಳ್ಳಿ, ಬೆಂಗಳೂರು- 560079
Phone: 8123260454

Synopsys

ಲೇಖಕಿ ಪದ್ಮಿನಿ ನಾಗರಾಜು ಎಸ್.ಪಿ. ಅವರು ಬರೆದ ನಾಟಕ ಕೃತಿ ʻಅವ್ವʼ. ಪಿ. ಲಂಕೇಶ್‌ ಅವರ ʻಅವ್ವʼ ಕವನ ಮತ್ತು ಇತರೆ ಬರಹಗಳನ್ನು ಅಭ್ಯಸಿಸಿ ಲಂಕೇಶ್‌ ಅವರ ತಾಯಿ ದೇವಿರಮ್ಮನವರ ಬದುಕು ಮತ್ತು ಬವಣೆಗಳನ್ನು ಪ್ರಸ್ತುತ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಪದ್ಮಿನಿ ಅವರಿಗೆ ತಮ್ಮ ತಾಯಿಯ ಬಗ್ಗೆ ಇರುವ ಪ್ರೀತಿಯ ಅಭಿವ್ಯಕ್ತಿಯನ್ನೂ ಈ ನಾಟಕದಲ್ಲಿ ಕಾಣಬಹುದು.

 ಪುಸ್ತಕದಲ್ಲಿ ಗೌರಿ ಲಂಕೇಶ್‌ ಅವರ ಬೆನ್ನುಡಿಯ ಮಾತುಗಳಿವೆ.

About the Author

ಪದ್ಮಿನಿ ನಾಗರಾಜ್ ಎಸ್.ಪಿ.
(06 April 1966)

ಪದ್ಮಿನಿ ನಾಗರಾಜು ಅವರು ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಗಂಗಾವತಿ, ಚಿಕ್ಕಮಗಳೂರಿನಲ್ಲಿ ವಿದ್ಯಾಭ್ಯಾಸ. ಸ್ನಾತಕೋತ್ತರ ಹಾಗೂ ಪಿಎಚ್‌.ಡಿ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ. ಪ್ರಸ್ತುತ 'ರಾಣಿ ಸರಳಾದೇವಿ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಹಾಗೂ ‘ಕೇಂದ್ರ ಸಾಹಿತ್ಯ ಅಕಾಡೆಮಿ'ಯ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಅವರ ಅನೇಕ ಲೇಖನ, ಕಥೆ, ಕವಿತೆಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಂಕಣಕಾರ್ತಿಯಾಗಿಯು ಗುರುತಿಸಿಕೊಂಡಿದ್ದಾರೆ. 'ಗೆಳತಿಯಾಗುವುದೆಂದರೆ' (ಕವನ ಸಂಕಲನ), 'ಸಮಾಧಿ ಮೇಲಿನ ಹೂ' (ಕಥಾ ಸಂಕಲನ), 'ಅವ್ವ' (ಲಂಕೇಶರ ಆತ್ಮಚರಿತ್ರೆಯನ್ನು ಆಧರಿಸಿದ ನಾಟಕ), 'ಅರಿವಿನ ಮಾರ್ಗದ ಸೋಪಾನಗಳು-ಅನುಪ್ರೇಕ್ಷೆಗಳು' (ಸಂಶೋಧನೆ), ಕೃಷ್ಣಮೂರ್ತಿ ಕವತ್ತಾರ (ವ್ಯಕ್ತಿಚಿತ್ರ), ಸಮತ್ವ (ಪ್ರಬಂಧ ಸಂಕಲನ) ...

READ MORE

Related Books