ಕವಿ ಆಶ್ಫಾಕ್ ಪೀರಜಾದೆ ಅವರ ಕವಿತೆಗಳ ಸಂಕಲನ-ನನ್ನೊಳಗಿನ ಕವಿತೆ. ಕವಿತೆ ಎಂದರೆ ಅಂತರಾಳದ ನೋವಿಗೆ ಸಾಥ್ ಕೊಡುವ ಸಂಗಾತಿ. ಖುಷಿಗೆ ಸುಖಾಸುಮ್ಮನೆ ಕೈ ಹಿಡಿಯುವ ದೈವ ಕನ್ನಿಕೆ. ನೊಂದವರ ಹೆಗಲ ತಬ್ಬಿ ಜೊತೆ ನೀಡುವ ಜೊತೆಗಾರ. ಆಕ್ರೋಶಕ್ಕೆ ಪುಟಿದೇಳುವ ಕೆಂಡದುಂಡೆ. ಪ್ರೀತಿಸುವ ಪುಟ್ಟ ಹೃದಯಗಳ ನಡುವಿನ ಸೇತುವೆ. ಈ ಎಲ್ಲ ಸಂಭ್ರಮಗಳೂ ಈ ಸಂಕಲನದಲ್ಲಿ ಇವೆ. ವಿಷಾದ ಬೆರೆತ ಧ್ವನಿಯಲ್ಲೇ ಬದುಕಿನ ವಿಭಿನ್ನ ಮುಖಗಳನ್ನು ಅನಾವರಣಗೊಳಿಸುತ್ತವೆ’ ಎಂದು ಕವಿಗಳು ಹೇಳುತ್ತಾರೆ.
ಕವಿ ಅಶ್ಫಾಕ್ ಪೀರಜಾದೆ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಸದ್ಯ, ಧಾರವಾಡದಲ್ಲಿ ನೆಲೆಸಿದ್ದು, ವೃತ್ತಿಯಿಂದ, ಪಶು ಸಂಗೋಪನಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು. ಕೃತಿಗಳು: ಪ್ರೇಮವೆಂದರೆ, ಜನ್ನತ್ ಮತ್ತು ಇತರ ಕಥೆಗಳು (ಕಥಾಸಂಕಲನಗಳು), ಮನೋಲೋಕ, ಒಂದು ಜೋಡಿ ಕಣ್ಣು, ನನ್ನೊಳಗಿನ ಕವಿತೆ (ಕವನ ಸಂಕಲನಗಳು) ...
READ MORE