ಬಂಟಮಲೆಯ ಧ್ಯಾನ

Author : ಅರವಿಂದ ಚೊಕ್ಕಾಡಿ

Pages 868

₹ 950.00




Published by: ರೂಪಾ ಪ್ರಕಾಶನ

Synopsys

‘ಬಂಟಮಲೆಯ ಧ್ಯಾನ’ ಕಾವ್ಯಸಂಕಲನ ಸುಬ್ರಾಯ ಚೊಕ್ಕಾಡಿ ಅವರ ಸೇರಿದಂತಹ ಸಮಗ್ರ ಲೇಖನಗಳ ಸಂಕಲನವಾಗಿದೆ. ಆರು ದಶಕಗಳ ಕಾಲ ಸುಬ್ರಾಯ ಚೊಕ್ಕಾಡಿಯವರು ಬರೆದಂತಹ 400ಕ್ಕೂ ಹೆಚ್ಚು ಕವನಗಳು ಇಲ್ಲಿವೆ. ‘ಬಂಟಮಲೆಯ ಧ್ಯಾನ’ ಕನ್ನಡದ ಬಹುಮುಖ್ಯ ಕಾವ್ಯ ಸಂಪುಟ. ಪಿ.ಎಚ್.ಡಿ ಮಾಡಬಯಸುವ ಸಾಹಿತ್ಯದ ವಿದ್ಯಾರ್ಥಿಗಳಿಗೆ ಆಕರ. ಚೊಕ್ಕಾಡಿ ಕಾಣದ ಚಿತ್ರಗಳಿಲ್ಲ. ಅವರು ಚಿತ್ರಿಸದ ದೃಶ್ಯಗಳಿಲ್ಲ. ಕಾವ್ಯಮೇಳದಲ್ಲಿ ಅವರ ಸ್ಥಾನ ಬಹುಬಣ್ಣದ್ದು ಮತ್ತು ಎತ್ತರದ್ದು. ಹುಡುಕುವ ಕಾಲಿಗೆ ಸೂಜಿಯೇ ಚುಚ್ಚಿ ತಾನೇ ಕಾಣಿಸಿಕೊಂಡ ಬಗೆ ಅವರಿಗಷ್ಟೇ ಸಿದ್ಧಿಯಾಗಿರುವುದು.

ಇಲ್ಲಿಯ ಒಂದು ಕವನ ಹೀಗಿದೆ;

ಬಣವೆಯಲ್ಲಿದ್ದಾಗ ಯಾರ ಗಮನಕ್ಕೂ ಬಾರದ ಸೂಜಿ
ಈಗ ಎಲ್ಲರ ನೋಟಕ್ಕೆ ಗುರಿಯಾದ ಹಾಗೇ.
ರಕ್ತದ ಜಾಡು ಹಿಡಿದು
ಒಬ್ಬೊಬ್ಬರೇ
ಪಾದದಲ್ಲಿ ಅಡಗಿರುವ
ಸೂಜಿಯ ಜಾಲಾಟಕ್ಕೆ ಬಂದ ಹಾಗೇ..
ಈ ಸಮಗ್ರ ಸಂಪುಟ ಓದುತ್ತಾ ನನಗೆ ಕೊನೆಗೆ ಅನಿಸಿದ್ದು ಇಷ್ಟು..
ಎಷ್ಟೊಂದು ಕೋಣೆಗಳು ಅರಮನೆಯ ಒಳಗೆ

About the Author

ಅರವಿಂದ ಚೊಕ್ಕಾಡಿ
(21 December 1975)

 ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ  ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ  ಬಿ. ಇಡ್. ಪದವೀಧರರಾಗಿರುವ ಇವರು  ಕರ್ನಾಟಕ ರಾಜ್ಯ  ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...

READ MORE

Related Books