ಮೊಖ್ತಾ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 48

₹ 4.00




Year of Publication: 1974
Published by: ಸಂಪದ ಪ್ರಕಾಶನ
Address: 2(69), ಆರನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018

Synopsys

ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರ ಕವನ ಸಂಕಲನ. ಈ ಸಂಕಲನದಲ್ಲಿ ಈ ಕೆಳಗಿನ ಕವಿತೆಗಳಿವೆ.-ಪುರವರ್ಣನ, ಒಂದು ಪ್ರಸಂಗ, ಕೆಲವು ಚಿತ್ರಗಳು, ಮಾಲಿಂಗಣ್ಣನ ಕಥೆ, ಎಲ್ಲಿಯ ಭೂಮಿ ಅದೆಲ್ಲಿಯ ಗಗನ?, ಸತಿಗೆ, ಮೆರವಣಿಗೆ, ಕೋಡಿಯ ಬಳಿ ಅವನು/ಳು, ಪರಿಸೆಯಲ್ಲಿ, ಪ್ರಯೋಗಶಾಲೆಯಲ್ಲಿ, ಕೆಂಚಿ ದ್ಯಾಮರ ಕಥೆ, ಕಾಲ ಅಂದರೆ, ಒಂದು ಹಳ್ಳಿಯಲ್ಲಿ ಏನಾಯಿತೂ ಅಂದರೆ, ಸತ್ಯದ ನೆನಪು, ಧವಳಪ್ಪನ ಗುಡ್ಡದಲ್ಲಿ, ಸರಿಗಮ ಪದ.

ಬೆನ್ನುಡಿಯಲ್ಲಿ ಕವಿ ಎಚ್‌.ಎಸ್‌.ವಿ. ಅವರು ’ಕವಿ ತನ್ನ ಓದುಗರೊಂದಿಗೆ ಮೊಖ್ತಾ ಸಂಬಂಧ ಹೇಗೆ ಏರ್ಪಡಿಸಿಕೊಳ್ಳುವುದು? ವಿಮರ್ಶಕರ ’ಸಹಾಯ ಸಹಖಾರ’ಗಳಿಲ್ಲದೆಯೂ ಕವಿ ಹೇಗೆ ಹೃದಯವಂತರ ಅಪಾರ ಸಮೂಹ ಒಂದಕ್ಕೆ ತನ್ನ ಕವನಸೂಕ್ಷ್ಮಗಳನ್ನು ತಲುಪಿಸುವುದು? ಎಷ್ಟೇ ವಯಸ್ಸಾದರೂ ಮೋರೆ ಮಾಸದ ನಮ್ಮ ವೈಭವಪೂರ್ಣ ಪ್ರಕಟನೆಗಳೂ ವ್ಯಂಗ್ಯಗಳೋ ವಿಡಂಬನೆಗಳೋ? ಕಾವ್ಯ ಎಲ್ಲರಿಗೂ ಅಲ್ಲ ಎಂಬ ದಿವ್ಯವಾಣಿ ಪಕ್ಕಾ ಆತ್ಮವಂಚನೆ ಯಾಕಿರಬಹುದು? ಮೇಲ್ನೋಟಕ್ಕೆ ಸರಳವಾಗಿ ತೋರಿಯೂ ಒಳ್ಳೆಯಕಾವ್ಯ ಸಾಧ್ಯವಾಗಬಹುಲ್ಲವೆ? ಎಂದು ಬರೆದಿದ್ದಾರೆ.

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books