ನನ್ಯ ಕಾವ್ಯ-ಕವಿ ಯಲ್ಲಪ್ಪ ಹಲಕುರ್ಕಿ ಅವರ ಕವನ ಸಂಕಲನ. ಒಟ್ಟು 52 ಕವನಗಳಿವೆ. ಸಾಮಾಜಿಕ ಅನ್ಯಾಯ ವಿರೋಧಿ ಮನೋಭಾವ, ಬಯಲುಸೀಮೆಯ ದಾರುಣ ಅನುಭವ, ಬಾಲ್ಯದ ಕಡು ಬಡತನ, ಅಧ್ಯಾತ್ಮಕ ಒಲವು, ಧಾರ್ಮಿಕ ವ್ಯಕ್ತಿಗಳ ಸ್ಮರಣ-ಗುಣಗಾನ, ಸಾಮಾಜಿಕ ಹೊಣೆಗಾರಿಕೆ ಹೀಗೆ ವಿಷಯ ವೈವಿಧ್ಯತೆಯನ್ನು ಕವನಗಳು ಒಳಗೊಂಡಿವೆ.
ಯಲ್ಲಪ್ಪ ಹಲಕುರ್ಕಿ ಅವರು ಗದಗ ಜಿಲ್ಲೆಯ ರೋಣ ತಾಲೂಕಿನ (01-06-1954) ಯಾವಗಲ್ ಗ್ರಾಮದವರು. 13 ಗ್ರಂಥಗಳನ್ನು ರಚಿಸಿದ್ದಾರೆ. ವಚನ, ಕವನ, ಜೀವನ ಚರಿತ್ರೆ ರಚಿಸಿದ್ದು, ರಾಜ್ಯ ವಚನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚಿಸಿದ್ದಾರೆ. ಆಕಾಶವಾಣಿಯಲ್ಲಿ 200ಕ್ಕೂ ಹೆಚ್ಚು ಕವನಗಳು ಪ್ರಸಾರವಾಗಿವೆ. ಬಾಲ್ಯದಲ್ಲಿ ಬಡತನದ ಕರಾಳ ಅನುಭವ, ಸಜ್ಜನರ ಸಂಗ, ಬಯಲುಸೀಮೆ ಪರಿಸರ, ವಾಸ್ತವ ಸಮಾಜ ಇವರ ಕಾವ್ಯಕ್ಕೆ ಪ್ರೇರಣೆಯಾಗಿವೆ. ಡಿವೈನ್ ಔರಾ ಮತ್ತು ಡಿವೈನ್ ಲೈಟ್ ಈ ಎರಡೂ ...
READ MORE