‘ಕಾಡೊಡಲ ಹಾಡು’ ಲೇಖಕ ಕುರುವ ಬಸವರಾಜ್ ಅವರ ಕವನ ಸಂಕಲನ. ಈ ಕೃತಿಗೆ ಮೊಗಳ್ಳಿ ಗಣೇಶ್ ಅವರ ಮುನ್ನುಡಿ ಹಾಗೂ ಪ್ರೊ.ಎಸ್. ಬಸವರಾಜು ಅವರ ಬೆನ್ನುಡಿ ಇದೆ. ಕೃತಿಯ ಕುರಿತು ಬರೆಯುತ್ತಾ ಕುರುವ ಬಸವರಾಜ್ ಅವರ ‘ಕಾಡೊಡಲ ಹಾಡು’ ಜಾನಪದ ಆಶಯ-ನೆಲೆಗಳನ್ನು ಬಳಸಿಕೊಂಡು ವರ್ತಮಾನದ ತಳಮಳ-ಆತಂಕಗಳನ್ನು ಒಂದು ರೂಪಕದ ಮಾದರಿಯಲ್ಲಿ ಕಟ್ಟಿಕೊಡುವ ಒಂದು ನಿಡುಗವಿತೆ, ಇದರ ಭಾಷೆ, ನಿರೂಪಣೆ, ಮಕ್ಕಳನ್ನು ದೃಷ್ಟಿಯಲ್ಲಿಟ್ಟು ಕೊಂಡಿದ್ದರೂ ಆಶಯದಲ್ಲಿ ಮಕ್ಕಳ ಭಾವಪ್ರಪಂಚವನ್ನು ಮೀರಿ ತನ್ನ ನೆಲೆಗಳನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ ಎನ್ನುತ್ತಾರೆ ಪ್ರೊ. ಎಸ್. ಬಸವರಾಜು. ಜೊತೆಗೆ ಈ ಕಿರುಕೃತಿಯಲ್ಲಿ ಮನುಷ್ಯನ ಆಸೆಬುರುಕತನ, ಸ್ವಾರ್ಥ, ಕೃತಘ್ನತೆ, ವಿನಾಶಕಾರಿ ಪ್ರವೃತ್ತಿಗಳನ್ನು ಅನಾವರಣಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಲೇಖಕ, ಜಾನಪದ ತಜ್ಞ ಕುರುವ ಬಸವರಾಜ್ ಅವರು ಮೂಲತಃ ಹಳೆಯ ಶಿವಮೊಗ್ಗ, ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುರುವ ಗ್ರಾಮದವರು. ಜಾನಪದ ಲೋಕದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ವಿ.ವಿ.ಯಿಂದ ಎಂ.ಎ(ಕನ್ನಡ) ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ ಫೆಲೋಷಿಪ್ ಗಾಗಿ ಕರ್ನಾಟಕ ಜನಪದ ಸಂಗೀತ ಅಧ್ಯಯನ ಮಾಡಿದ್ದಾರೆ. ಪ್ರಕಟಿತ ಕೃತಿಗಳು: ಹುಲ್ಲೆಹಾಡು, ಕಾಡೊಡಲ ಹಾಡು, ಬೇಲಿ ಮ್ಯಾಗಳ ಹೂವು, ಮಣ್ಣ ಕುಸುಮದ ಹಕ್ಕಿ (ಕಾವ್ಯಸಂಗ್ರಹಗಳು) ಸೆಳೆತ, ...
READ MORE