ಶರಣಪ್ಪ ಕೆ ಹುಲಗೇರಿ ಅವರ ಕವನ ಸಂಕಲನ ಮಾಡರ್ನ್ ಮಾನವರು. ಈ ಕೃತಿಗೆ ಎಸ್ಕೆ ಕೊನೆಸಾಗರ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಮೂಲತಃ ಇತಿಹಾಸ ಉಪನ್ಯಾಸಕರಾದ ಹೂಲಗೇರಿಯವರು ಬರಹಗಾರರಾಗಿ ಸಾಹಿತ್ಯ ಲೋಕಕ್ಕೆ ಪರಿಚಯಗೊಂಡಿದ್ದಾರೆ. ಸಾಹಿತ್ಯ ಸಂಘಟನೆ ಮತ್ತು ಕವಿತೆಯ ಜಾಡಿನಲ್ಲಿ ಸಾಗುವ ಇವರ ಅದಮ್ಯ ಇಚ್ಛಿ ಮೆಚ್ಚಬೇಕಾದ್ದು, ಹಾಗಂತಲೇ ಮಾಡರ್ನ ಮಾನವರು ಜನ್ಮ ತಳೆದಿದೆ. ನಮ್ಮ ವಾಸ್ತವ ಜಗತ್ತಿನ ಪ್ರಸಂಗಗಳು ಇಲ್ಲಿನ ಕವಿತೆಗಳ ವಸ್ತುಗಳಾಗಿವೆ. ಆಧುನಿಕ ವ್ಯಾಪಾರಿ ಜಗತ್ತಿನಲ್ಲಿ ನಮ್ಮ ದೇಸಿಯತೆ ಮತ್ತು ಮಾನವೀಯ ಮೌಲ್ಯಗಳು ಹೇಗೆ ಕಳೆದು ಹೋಗುತ್ತಿವೆ ಎಂಬ ಚಡಪಡಿಕೆ ಅನೇಕ ಕವಿತೆಗಳಲ್ಲಿ ತಮ್ಮ ನೇರ ಅಭಿಪ್ರಾಯದಿಂದ ಸಾದರಪಡಿಸಿದ್ದಾರೆ. ಒಂದಿಷ್ಟು ವಾಚ್ಯ ಎನಿಸಬಹುದಾದರ ಕಲೆಗಾರಿಕೆಯ ಹೊಳಹುಗಳನ್ನು ಕೆಲವು ಕವಿತೆಗಳಲ್ಲಿ ಕಾಣಬಹುದು. ಒಬ್ಬ ಇತಿಹಾಸದ ಬೋಧಕರಾಗಿ ಕಾವ್ಯ ಕನ್ನಿಕೆಯ ಕೈಹಿಡಿಯಲು ಹೊರಟ ಕನ್ನಡ ಕಾವ್ಯ ಮಟ್ಟುಗಳನ್ನು ನಿಧಾನವಾಗಿಯಾದರೂ ತಿಳಿಯಬೇಕು. ಅಂದಾಗ ಕವಿತೆ ಕಟ್ಟುವ ಹಾದಿಯಲ್ಲಿ ಗಟ್ಟಿಯಾದ ಹೆಜ್ಜೆ ಗುರುತುಗಳನ್ನು ಊರಬಹುದು ಎಂದಿದ್ದಾರೆ.
ಶರಣಪ್ಪ ಕೂಡ್ಲಪ್ಪ ಹೂಲಗೇರಿ ಅವರು 01-09-1967ರಂದು ಜನಿಸಿದರು. ಎಂ.ಎ.ಎಂ.ಇಡಿ ವಿದ್ಯಾರ್ಹತೆಯನ್ನು ಹೊಂದಿದ ಇವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕನಾಗಿ ಸೇವೆ ಪ್ರಾರಂಭಿಸಿದರು. ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜು ಶಿಕ್ಷಕನಾಗಿ ಬಡ್ತಿ ಹೊಂದಿದರು. ಸದ್ಯ ಹುನಗುಂದದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಮಾಡರ್ನ್ ಮಾನವರು (2016), ಹೊರೂನಾ ಕಾಲ (2021), ನೆನಪಂಬ ಹಾಯಿದೋಣಿ (2022) ಕವನ ಸಂಕಲನಗಳು, ಧ್ರುವತಾರೆ (2017) ನಾಟಕ ಕರ್ನಾಟಕ ನಾಟಕ ಅಕಾಡೆಮಿಯಿಂದ ಸಂಪಾದಿತ ಏಳು ನಾಟಕಗಳು ಸಂಕಲನದಲ್ಲಿ ಪ್ರಕಟವಾಗಿದೆ. ...
READ MORE