'ಹಾಡುಗಳು ಉಳದಾವ' ಕವನ ಸಂಕಲನ, ಡಾ. ಕಾಶಿನಾಥ ಅಂಬಲಗೆ ಅವರ 35ನೇ ಕೃತಿ, 'ಜೋಳಗಳು ಮುಗದಾವ ಹಾಡುಗಳು ಉಳದಾವ' ಎಂದು ಬೀಸುವ ಹಾಡು ಹಾಡಿದ ಜನಪದ ಗರತಿಯ ಕಾವ್ಯ ಸತ್ವ ಈ ಕವನ ಸಂಕಲನದ ಶೀರ್ಷಿಕೆಯಾಗಿ ಬಂದಿದ್ದು ಧ್ವನಿಪೂರ್ಣವಾಗಿದೆ.
ಲೌಕಿಕ ಬದುಕಿಗೊಂದು ಅಂತ್ಯವಿದೆ, ಆದರೆ ಕಾವ್ಯ ಅನಂತವಾಗಿದೆ. ಕಾವ್ಯ ಎಂಬುದೊಂದು ನಿರಂತರ ಕ್ರಿಯೆ. ಅದು ಹರಿಯುವ ನದಿಯಲ್ಲಿ, ಸಮುದ್ರದ ಅಲೆಗಳಲ್ಲಿ, ಹೂವಿನ ಸುವಾಸನೆಯಲ್ಲಿ, ಬಡವರ ಕಣ್ಣೀರಿನಲ್ಲಿ, ಪ್ರೇಮಿಗಳ ನಗೆಯಲ್ಲಿ, ಮುಂಜಾವಿನ ತಂಗಾಳಿಯಲ್ಲಿ, ಅಂಬೆಗಾಲಿಕ್ಕುವ ಮಗುವಿನ ತುಟಿಗಳಲ್ಲಿ ಹೀಗೆ ಎಲ್ಲೆಲ್ಲೂ ಕಾವ್ಯ ಸ್ಪುರಿಸುತ್ತಲೇ ಇರುತ್ತದೆ. ಬೇಕಾಗಿರುವುದು ಅನುಭಾವಿಸುವವರು ಮಾತ್ರ ಹೀಗೆ ಅನುಭಾವಿಸುವವರು ಕವಿಗಳಾಗುತ್ತಾರೆ.
ಆದರೆ ಬಹಳ ಜನ ಬರೆಯದ ಕವಿಗಳಾಗಿಯೇ ಉಳಿಯುತ್ತಾರೆ. ಕೆಲವರು ಮಾತ್ರ ಬರೆಯುವ ಕವಿಗಳಾಗಿ ಲೋಕದ ಜನಮಾನಸದ ಭಾವನೆಗಳನ್ನು ಶಬ್ದಜಾಲದಲ್ಲಿ ಹಿಡಿದಿಡುತ್ತಾರೆ. ಸಹೃದಯಿಗಳ ಹೃದಯ ಗೆಲ್ಲುತ್ತಾರೆ. ಕಾಶೀನಾಥ ಅಂಬಲಗೆ ಅವರು ಸಹೃದಯಿಗಳ ಹೃದಯ ಗೆಲ್ಲುವ ಕವಿಗಳಾಗಿದ್ದಾರೆ ಎಂಬುದಕ್ಕೆ ಇಲ್ಲಿಯ ಅನೇಕ ಕವನಗಳು ಸಾಕ್ಷಿಯಾಗಿವೆ.
ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ. ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...
READ MORE