'ತೇರ ಎಳೆಯ ಬಾರೋ' ಸುರೇಶ ಸಗರದ ಅವರ ಕವನ ಸಂಕಲನವಾಗಿದೆ. ಬದುಕಿನ ಬಗೆಗೆ ವಿಕಾಸಗತಿಯ ನಿರೀಕ್ಷೆ ಇಟ್ಟುಕೊಂಡಂತೆ ಚಿಂತಿಸುವ ಕವಿ ಮಾತ್ರ ನಿರಾಶೆಗಳ ನಡುವೆಯೂ ಹೊಸ ಕನಸುಗಳನ್ನು ಕಟ್ಟುತ್ತಾ ಕಾವ್ಯನಾವೆಯ ಹುಟ್ಟುಹಾಕುತ್ತಾನೆ. ಸುರೇಶ್ ಸಗರದ ಅವರ ಕವನ ಸಂಕಲನ 'ತೇರ ಎಳೆಯ ಬಾರೋ' ಇಂಥ ನಿರೀಕ್ಷೆಗಳ ನಾವೆಯಲ್ಲಿ ಹೊಸ ಬದುಕಿಗೆ ಹಂಬಲಿಸಿದ ಸಂಕಲನ, ಇಲ್ಲಿ ಪ್ರೀತಿ, ಮಮತೆ, ವಾತ್ಸಲ್ಯಗಳ ಭಾವಬಂಧದ ಜೊತೆಗೆ ಜಗತ್ತಿನಲ್ಲಿ ಬೆಳೆಯುತ್ತಿರುವ ಯುದ್ಧಕೋರತನದ ಬಗ್ಗೆ ಪ್ರಕ್ಷುಬ್ಧಗೊಂಡ ಭಾವಸ್ಥಿತಿಯ ರಚನೆಗಳೂ ಇವೆ, ಸಮಕಾಲೀನ ಬದುಕಿನ ಎಲ್ಲ ಮಗ್ಗುಲುಗಳಿಗೆ ತುಡಿದಂತೆ ನುಡಿಯುವ ಛಾತಿ ಇರುವ ಈ ಕವಿಗೆ ಭಾಷೆಯ ಮೇಲೆ ಪ್ರಭುತ್ವವಿದೆ, ಕವನ ಕಟ್ಟುವ ಕ್ರಿಯೆಗೆ ಬೇಕಾದ ಪೂರ್ವ ತಯಾರಿಗಳಿವೆ. ಹೀಗಾಗಿ ಕಾವ್ಯಕರ್ಮವೆಂಬುದು ಈ ಕವಿಗೆ ಸಾಮಾಜಿಕ ಹೊಣೆಯಂತ ಜವಾಬ್ದಾರಿ ಎಂಬ ಅರಿವಿದೆ.
ಸುರೇಶ ಸಗರದ ಅವರು ವೃತ್ತಿಯಲ್ಲಿ ವೈದ್ಯರು. ಪ್ರವೃತ್ತಿಯಿಂದ ಬರಹಗಾರರಾಗಿದ್ದಾರೆ. ಬಸವ ತತ್ತ್ವದ ಬಗ್ಗೆ ವಿಶೇಷ ಒಲವು ಹೊಂದಿರುವ ಅವರು ಅವರ ಬಗ್ಗೆ ಎರಡು ಕೃತಿಗಳನ್ನು ರಚಿಸಿದ್ದಾರೆ. ಕೃತಿಗಳು: ಹೃದಯದಿಂದ ಹೃದಯಕ್ಕಾಗಿ, ಮಧುಮೇಹ ಜೀವನ ಸಂಗಾತಿ, ಅಂಗದಾನ, “ಬಸವನ ಕಂಡಿರಾ 2” ಬಸವನ ಕಂಡಿರಾ ...
READ MORE