‘ಪ್ಯಾಲೆಸ್ಟೀನ್ ಕವಿತೆಗಳು ಆಲಿವ್ ಮರ ಮತ್ತು ವೀಲ್ ಚೇರ್’ ಕೃತಿಯು ವಸಂತ ಬನ್ನಾಡಿ ಅವರ ಕವನಸಂಕಲನವಾಗಿದೆ. ಕಗ್ಗತ್ತಲ ಕಾಲದಲ್ಲಿರುವ ಪ್ಯಾಲೆಸ್ಟೀನ್ ಬಗ್ಗೆ ಬರೆದ ಕವನಗಳು ಇಲ್ಲಿವೆ. ಈ ಕೃತಿಯಲ್ಲಿನ ಕೆಲವೊಂದು ಸಾಲುಗಳು ಹೀಗಿವೆ; ಬಿಡಾರದೊಳಗೆ ಮೂತಿ ತೂರಿಸಿದ ಒಂಟೆ ಈಗ ಗುಡಾರವನ್ನೇ ತನ್ನದೆಂದು ಸಾಧಿಸಲು ನಿಂತಿದೆ. ಇದಕ್ಕೆ ಪ್ರತಿಯಾಗಿ ಸಾವಿರಾರು ಜನರ ಮಾರಣ ಹೋಮ. ಸತ್ತ ಮಕ್ಕಳ ಸಂಖ್ಯೆಯೇ ಏಳು ಸಾವಿರ ಮೀರಿದೆ. ಸುಳ್ಳನ್ನು ಸತ್ಯವೆಂದು ಸಾಧಿಸಲು ಹೊರಟಿರುವ ನಾಯಕರು, ಮಾಧ್ಯಮಗಳ ಮುಂದೆ ಪ್ಯಾಲೆಸ್ಟೀನ್ ಅಸಹಾಯಕವಾಗಿದೆ. ಪ್ಯಾಲೆಸ್ಟೀನ್ ನೆಲದಲ್ಲಿ ಕವಿತೆಗಳು ತಬ್ಬಿಬ್ಬಾಗಿವೆ. ಅಂತಹ ಸಂದರ್ಭದಲ್ಲಿ ವಸಂತ ಬನ್ನಾಡಿ ಅವರ ಈ ಕವಿತೆಗಳ ಗುಚ್ಛ ಶತಮಾನದ ನೋವನ್ನು ಮುಂದಿಡುತ್ತದೆಯಲ್ಲದೆ ನಮ್ಮೊಳಗಿನ ಸಾಕ್ಷಿಪ್ರಜ್ಞೆಯನ್ನು ಎಚ್ಚರಿಸುತ್ತದೆ.
ಸಾಹಿತಿ ವಸಂತ ಬನ್ನಾಡಿ ಅವರು 1955 ಸೆಪ್ಟೆಂಬರ್ 20ರಂದು ಉಡುಪಿ ಜಿಲ್ಲೆಯ ಕೋಟದಿಂದ ಮೂರು ಮೀ. ದೂರದ ಬನ್ನಾಡಿಯಲ್ಲಿ ಜನಿಸಿದರು. ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಅಧ್ಯಪಕರಾಗಿ ವೃತ್ತಿ ಆರಂಭಿಸಿದರು. ಬಾಲ್ಯದಿಂದಲೂ ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಕಾಲೇಜು ದಿನಗಳಲ್ಲೇ ಬರೆದ ಕತೆ, ಕವನಗಳು ಮಾಸಿಕದಲ್ಲಿ ಪ್ರಕಟವಾಗಿವೆ. ಈವರೆಗೂ ಸುಮಾರು 25 ನಾಟಕಗಳನ್ನು ನಿರ್ದೇಶಿಸಿರುವ ಇವರಿಗೆ ನಾಲ್ಕು ಬಾರಿ ರಾಜ್ಯಮಟ್ಟದ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಬಂದಿದೆ.ಇವರ ಕೃತಿಗಳು ಕಡಲಧ್ಯಾನ, ನೀಲಿಹೂ, ನಿಜದ ನೆಲೆ (ಕವನ ಸಂಕಲನಗಳು) ಸಂಸ್ಕೃತಿ ಚಿಂತನೆ, ಲೇಖನಗಳು, ಬೆಂಕಿಯ ನಾನೇ ಆಹುತಿಯೂ ...
READ MORE