ಚಂದ್ರಶೇಖರ ಪಾಟೀಲ ಅವರ ಸಮಗ್ರ ಕವಿತೆಗಳ ಸಂಕಲನ -ದೇವಬಾಗ. ಕವಿಗೋಷ್ಠಿ ಮತ್ತು ಉಗಾದಿ, ಅಂಗೀ ಸಮಾಚಾರ, ಬೋರ, ಚಹಾ-ಚೂಡಾ, ಅಂತೂ ಕೊನೆಗೊಮ್ಮೆ, ಹಿಚುಕಲಾರೆ, ಐತಿಹ್ಯ, ನೀತಿಪಾಠ, ಆಲ್‌ಡೌನ್, ಮಿನಿ, ಜಗತ್ಪ್ರಸಿದ್ಧ, ಅತ್ಯ ಎಂಬುದು, ಗೆಳೆಯನೊಬ್ಬನಿಗೆ, ಶಬ್ದ ಹಂತಕರು, ಈ ಸಲದ ಯುಗಾದಿಗೆ, ನಂದಿ ಮತ್ತು ಹಂದಿ, ದೇವ ಪೂಜಾ ವಿಧಾನ, ಕನ್ನಡ ಕನ್ನಡ ಬರ್‍ರಿ ನಮ್ಮ ಸಂಗಡ, ಹಾದಿ, ನಿಷ್ಠೆ, ಪಾಂಚಾಲಿ ಪಂಚಾರತಿ, ಕಾರಂತ: ಡಿಸೆಂಬರ್ ಹತ್ತು, ಸುಖೀ ಸಂಸಾರ, ನಾವು ಒಂದೇ, ಆಧ್ಯಾತ್ಮ, ಹುಡುಕು, ಬುದ್ಧ ಚಂದ್ರ, ಮೌನ, ವ್ಯಾಕರಣ: ಒಂದು ಡೈಲಾಗು, ವಾಸನೆ, ಮೂರ್ಖ ಹಕ್ಕಿ, ಸ್ವಾತಂತ್ಯ್ರೋತ್ಸ: 1999, ನಿಂತ ನೀರು, ಶರ್ಮ: ಎರಡು ಮುಖ, ಹಗಲುವೇಷಗಳು, ಶಬ್ದ ಹೇಳಿತು, ಪ್ರಸಾದ, ಅಲ್ಲಿ ಇಲ್ಲಿ, ಹೊದಿಕೆ, ನೀನೇ, ಮಾತ್ರಕ್ಕೆ, ಸರಾಗ, ಅಡ್ಡಗೋಡೆ, ಅಂಗಿ, ಏನು ಮಹಾ, ತಿಳಿಯಲಾರದ್ದು, ಕಪ್ಪು, ಆ ದಡ ಈ ದಡ, ತುಡಿತ, ಚೈತ್ರನ ಪ್ರಶ್ನೆ, ಬಯಲ ಬೆಳಕು, ನಮ್ಮೂರು, ಮುಖ, ದಂಡೆತ ಮೇಲೊಂದು, ಇಂದಿರಾ, ನಂದಿಸಿಬಿಡು, ಥ್ಯಾಂಕ್ಯೂ ಸರ್, ಕಗ್ಗೊಲೆಯ ಅಂಗಳದಲ್ಲಿ, ಕಾಶ್ಮೀರ ಕಣಿವೆಯಲ್ಲಿ ಹಾಗೂ ದೇವಬಾಗ ಮುಂತಾದ ಕವಿತೆಗಳನ್ನು ಈ ಸಂಕಲನ ಒಳಗೊಂಡಿವೆ.
'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...
READ MORE