ವೃತ್ತಿಯಲ್ಲಿ ಪತ್ರಕರ್ತರಾಗಿರುವ ಮುರಲಿಕೃಷ್ಣ ಅವರು ತಾನು ಕಂಡು ಕೇಳಿದ ಘಟನೆಗಳನ್ನು ತನ್ನೊಳಗೆ ಮಂಥನ ನಡೆಸಿ ಅದಕ್ಕೆ ಕಾವ್ಯ ಸ್ವರೂಪ ನೀಡಿ ರಚಿಸಿರುವ ಕವನಗಳ ಸಂಕಲನವೇ ಹನಿ ಮಳೆ. ಕೃತಿಯ ಬಗ್ಗೆ ಮುನ್ನುಡಿಯಲ್ಲಿ ಬರೆದಿರುವ ಜರಗನಹಳ್ಳಿ ಶಿವಶಂಕರ್ ಅವರು ಕವಿಯ ಆಲೋಚನಾ ಗುಣವನ್ನು ವಿವರಿಸಿದ್ದಾರೆ. ಶಿವಶಂಕರ್ ಅವರನ್ನು ಬಹಳವಾಗಿ ಕಾಡಿರುವ ಕಿರುಕವಿತೆ ನಿಮ್ಮ ಓದಿಗಾಗಿ. ಹುಟ್ಟು ಸಾವಿನ ಒಂದು ಸುಂದರ ಚಿತ್ರಣವಾಗಿ ಈ ಕವಿತೆ ಮೂಡಿದೆ.
ಚಿಗುರೆಲೆ
ಗಿಡದಲ್ಲಿನ ಎಲೆ
ಚಿಗುರಿದ್ದು, ಬೆಳೆದದ್ದು
ಪಕ್ಕದಲ್ಲಿ
ಚಿಗುರೆಲೆ ಮೊಳೆತದ್ದು
ಯಾವುದೂ
ಅರಿವಿಗೆ ಬರಲಿಲ್ಲ
ಆದರೆ ಹಣ್ಣೆಲೆಯು ಬಿದ್ದು
ತರಗೆಲೆಯ
ಸದ್ದು ಮಾತ್ರ
ಎಲ್ಲರಿಗೂ ಕೇಳಿಸಿತ್ತು
ಅರಿವಿಗೆ ಬರಲಿಲ್ಲ.
ವೃತ್ತಿಯಿಂದ ವಕೀಲರಾದ ಮುರಲಿಕೃಷ್ಣ ಪಿ. ಬೆಳಾಲು ಅವರು ಪ್ರವೃತ್ತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರು. ಮೂಲತಃ ಉಜಿರೆಯವರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಬೆಂಗಳೂರಿನಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕರಾಗಿ, ವರದಿಗಾರಿಕೆಯಿಂದ 19 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಹೊಸದಿಗಂತ ಪತ್ರಿಕೆಯ ಮೂಲಕ ಪತ್ರಿಕಾರಂಗ ಪ್ರವೇಶಿಸಿದರು. ಉದಯಭಾನು ಕಲಾಸಂಘದ ಸ್ವರ್ಣ ಮಹೋತ್ಸವದ ಸಂದರ್ಭ ಮಾಧ್ಯಮ ನಿರ್ವಹಣೆ. ‘ಸ್ವರ್ಣ ತಾರೆ ಡಾ.ಬಿ.ಸರೋಜಾದೇವಿ’ - ಜೀವನ ಚಿತ್ರಣ, ‘ಮನದಾಳ’ - ಕವನ ಸಂಕಲನ, ‘ಜೀವದ ಹಣತೆ ಕವನಗಳ ಗುಚ್ಛ’, ‘ಹನಿಮಳೆ ಜಿನುಗುವ ಹನಿಗಳು’- ಹನಿಗವನ ಸಂಕಲನ ಅವರ ಪ್ರಮುಖ ಕೃತಿಗಳು. ‘ಸಪ್ತಸ್ವರ ...
READ MORE