ಕಣ್ಣುಗಳಲಿ ಕನಸು ತುಂಬಿ

Author : ಹೇಮಾ ಪಟ್ಟಣಶೆಟ್ಟಿ

Pages 80

₹ 24.00




Year of Publication: 1993
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

ಕನ್ನಡ ಕಾವ್ಯದಲ್ಲಿ ವಿಶಿಷ್ಟ ಧ್ವನಿಯಾದ ಹೇಮಾ ಪಟ್ಟಣಶೆಟ್ಟಿಯವರ ಮೂರನೆಯ ಕವನ ಸಂಕಲನ 'ಕಣ್ಣುಗಳಲ್ಲಿ ಕನಸು ತುಂಬಿ', ಆಶಾವಾದಿತನ, ಜೀವನೋತ್ಸಾಹ, ಊರ್ಧ್ವಮುಖಿ ಚಿಂತನೆ, ಕೌಟುಂಬಿಕ ಪ್ರೀತಿ-ಮಾರ್ದವತೆಗಳು ಇದರ ಪ್ರಾಣಶಕ್ತಿ, ಕನಸು-ವಾಸ್ತವ, ಭಾವ-ವಿಚಾರ, ವ್ಯಷ್ಟಿ-ಸಮಷ್ಟಿಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಎಚ್ಚರ ಇಲ್ಲಿ ತೀವ್ರ ವಾಗಿದೆ.

'ಈ ಕವಿತೆಗಳು ಹೊಮ್ಮಿಸುವ ವಿಚಾರ ಅವುಗಳ ಸ್ವರೂಪದೊಳಗಿನಿಂದಲೇ-ಶಬ್ದ , ಲಯಗಳ ನಾದಮಯ ವಾತಾವರಣದಲ್ಲಿ ಅರಳುವ ವಿಧಾನ ಸಂತೋಷ ನೀಡುವಂಥದು. 'ಜಾಗೃತ ಮಹಿಳಾ ಸಾಹಿತ್ಯ ಪರಂಪರೆಯ ಮುಂದುವರಿಕೆಯಾದ ಹೇಮಾ ಅವರ ಕವಿತೆಯ ಬಹಳ ಮುಖ್ಯವಾದ ಆಕರ್ಷಣೆಗಳಲ್ಲಿ ಒಂದು, ಸ್ತ್ರೀವಾದೀ ವೈಚಾರಿಕತೆ ಮತ್ತು ಅಂಥದೊಂದು 'ಬಂಧನ'ಕ್ಕೆ ಸಿಲುಕಬಯಸದ ನಿಜವಾದ ಕಲಾವಿದೆಯೊಬ್ಬಳ ಸರ್ವಗ್ರಾಹೀ ಪ್ರಾಮಾಣಿಕತೆಗಳ ನಡುವಿನ ತಾಕಲಾಟದಿಂದ ಮೂಡುತ್ತದೆ. ಅವರ ವೈಶಿಷ್ಟ್ಯತೆ ಇರುವುದು ಹೆಣ್ಣಿನ ಜೈವಿಕ ಅನನ್ಯತೆ ಮತ್ತು ಅವಳ ಶೋಷಿತ ಸಾಮಾಜಿಕ ನೆಲೆಗಳ ನಡುವೆ ಅವರು ಸಾಧಿಸುವ ಸಂಯೋಜನೆಯಲ್ಲಿ, ಅಷ್ಟೇ ಮುಖ್ಯವಾಗಿ, 'ಶಬ್ದ'ದ ಧ್ವನಿ ನೆಲೆ ಗಳ ಜಾಡು ಹಿಡಿದು ಅರ್ಥದ ಸರಣಿಯನ್ನು ಹುಟ್ಟಿಸುವ ಗುಣದಲ್ಲಿ. ಹೆಣ್ಣಿನ ಶಿಲುಬೆಯಾದ ನೂರು ಜಂಜಡಗಳ ನಡುವೆಯೂ ಇರುವ ಉಲ್ಲಾಸವನ್ನು ಮುಚ್ಚಿಡುವ ಆತ್ಮವಂಚನೆ ಮಾಡಿಕೊಳ್ಳದಿರುವುದರಲ್ಲಿ ಅವರ ಕವಿತೆಯ ಸಂಕೀರ್ಣತೆ ಹುಟ್ಟುತ್ತದೆ.

About the Author

ಹೇಮಾ ಪಟ್ಟಣಶೆಟ್ಟಿ
(10 February 1954)

ಕವಯತ್ರಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಅವರು ಮನೋವಿಜ್ಞಾನ ಹಾಗೂ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ವಿರಹೋತ್ಸವ, ಹೊಸಹಾಡು, ಕಣ್ಣುಗಳಲಿ ಕನಸು ತುಂಬಿ, ಮುಸುಕಿದೀ ಮಬ್ಬಿನಲಿ, ಬಗಾಟ ಬಗರಿ, ತುಂಟ ಮಕ್ಕಳ ತಂಟೆ, ಹೆಣ್ಣು. ವಿಮರ್ಶೆ/ವಿಚಾರ ಸಾಹಿತ್ಯ : ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ ಮುಂತಾದವು. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ, ಮಲ್ಲಿಕಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ.  ಅನನ್ಯ ಪ್ರಕಾಶನ ಸ್ಥಾಪಿಸಿ 90ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಂಕಲನ ...

READ MORE

Related Books