ಸಿದ್ಧಾಂತಗಳ ಹೇಗೆ ಕೊಲ್ಲುವೆ...?

Author : ಕು. ಸ. ಮಧುಸೂದನ

Pages 86

₹ 150.00




Year of Publication: 2020
Published by: ವಿಶ್ವಶಕ್ತಿ ಪ್ರಕಾಶನ
Address: # 1ನೇ ಮುಖ್ಯರಸ್ತೆ, 5ನೇ ತಿರುವು, ಉಮಾಶಂಕರ ನಗರ, ರಾಣೇಬೆನ್ನೂರು (ಜಿಲ್ಲೆ ಹಾವೇರಿ)

Synopsys

ಕವಿ ಕು.ಸ. ಮಧುಸೂದನ್ ಅವರ ಕವನ ಸಂಕಲನ-ಸಿದ್ಧಾಂತಗಳ ಹೇಗೆ ಕೊಲ್ಲುವೆ...? ಸಾಹಿತಿ ನಾಗರಾಜ್ ಹರಪನಹಳ್ಳಿ ಅವರು ಕೃತಿಗೆ ಬೆನ್ನುಡಿ ಬರೆದು ‘ಗೆದ್ದವರ ಬಾಲ ಹಿಡಿಯುವುದೇ ಬದುಕು ಎಂಬ ಮನಸ್ಥಿತಿಯ ವಿರುದ್ಧವಿರುವ ಇಲ್ಲಿಯ ಕವಿತೆಗಳು ದುಡಿತ ಹಾಗೂ ದುಡಿಯುವವರ ಪರವಾಗಿ ನಿಲ್ಲುತ್ತವೆ’ ಎಂದು ಪ್ರಶಂಸಿಸಿದ್ದಾರೆ. ಕಾವ್ಯವಸ್ತು, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯ ಎಚ್ಚರಿಕೆಯಂತಹ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ.

About the Author

ಕು. ಸ. ಮಧುಸೂದನ

ಕವಿ,ಕತೆಗಾರ, ರಾಜಕೀಯ ವಿಶ್ಲೇಷಕ ಕು.ಸ.ಮಧುಸೂದನ ಅವರು 1963ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜನಿಸಿದರು. ಮಾತೃಭಾಷೆ ಮಲೆಯಾಳಂ. ಆದರೂ, ಓದಿದ್ದು ಬರೆದಿದ್ದು ಮಾತ್ರ ಕನ್ನಡದಲ್ಲಿಯೇ. ಸರ್ಕಾರಿ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಕರಾಗಿ 30 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ಇದೀಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ರಂಗೇನಹಳ್ಳಿ(ಮುಡುಗೋಡು) ಗ್ರಾಮದಲ್ಲಿನೆಲೆಸಿದ್ದಾರೆ. ’ಅಸಹಾಯಕ ಆತ್ಮಗಳು’ ಕಥಾ ಸಂಕಲನ ರಚಿಸಿದ್ದು, ’ದುರಿತ ಕಾಲದ ದನಿ” ಅವರ ಕವನ ಸಂಕಲನ. ಸಮಕಾಲೀನ ರಾಜಕೀಯ ವಿದ್ಮಮಾನಗಳ ವಿಶ್ಲೇಷಣೆ ಒಳಗೊಂಡ ’ಮಣ್ಣಿನ ಕಣ್ಣು ಭಾಗ - 1 ಮತ್ತು 2' ನ್ನು ಪ್ರಕಟಿಸಿದ್ದಾರೆ ...

READ MORE

Related Books