Year of Publication: 2015 Published by: ಅಲ್ಲಮ ಪ್ರಕಾಶನ Address: ನಂ.45, ವಿಶ್ವಮಾನವ ಡಬಲ್ ರೋಡ್, ಕುವೆಂಪುನಗರ, ಮೈಸೂರು-9
Share On
Synopsys
‘ಸಾವೊಂದನು ಬಿಟ್ಟು’ ಕವಿ, ಕಥೆಗಾರ ಸ್ವಾಮಿ ಪೊನ್ನಾಚಿ ಅವರ ಕವನ ಸಂಕಲನ. ಈ ಕೃತಿಗೆ ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಬೆನ್ನುಡಿ ಬರೆದಿದ್ದಾರೆ. ಕವಿತೆಗಳ ಕುರಿತು ಬರೆಯುತ್ತಾ ‘ಕೆಲವರಾದರೂ ಕವಿಗಳಿಗೆ ದಲಿತ-ಬಂಡಾಯವೆಂಬ ಪಂಥದ ಒತ್ತಾಸೆಯ ಅಗತ್ಯವಿಲ್ಲವೆಂದು ಕಾಣುತ್ತದೆ. 90ರ ದಶಕದಲ್ಲಿ ಕಿ.ರಂ.ನಾಗರಾಜ ಮತ್ತು ಡಿ.ಆರ್. ನಾಗರಾದ್ ಹುಟ್ಟುಹಾಕಲೆತ್ನಿಸಿದ ಜಾಗೃತ ಸಾಹಿತ್ಯ ಎಂಬ ಪಂಥವನ್ನು ಚಾಲೂ ಮಾಡುತ್ತಿರುವಂತೆ ಕೆಲವರು ಬರೆಯುತ್ತಿದ್ದಾರೆ. ಅತ್ಯಂತ ಸಂಕೀರ್ಣವಾಗಿಯೂ ಮತ್ತು ಸರಳವಾಗಿಯೂ ಬರೆಯಲ್ಪಡುತ್ತಿರುವ ಕವಿತೆಗಳು ಈಗ ಓದಿಗೆ ಸಿಗುತ್ತವೆ. ಕಾಮ, ಪ್ರೇಮ, ವಿರಹ, ಹಸಿವು, ಬಡತನ, ಭ್ರಷ್ಟಾಚಾರ ಎಲ್ಲವನ್ನು ಕುರಿತು ಹೊಸ ತಲೆಮಾರಿನ ಕವಿಗಳು ಬೇರೊಂದು ಮಜಲಿನಲ್ಲಿ ಬರೆಯುತ್ತಿದ್ದಾರೆ. ಆದ್ದರಿಂದ ನಲವತ್ತು ವರ್ಷಗಳಷ್ಟು ಹಳತಾಗಿರುವ ದಲಿತ ಬಂಡಾಯವೆಂಬ ನಾಮೆನಕ್ಲೇಚರ್ ಅನ್ನು ಬದಲಾಯಿಸಬೇಕಾದ ಕಾಲ ಒದಗಿಬಂದಿದೆ ಎನ್ನುತ್ತಾರೆ. ಇನ್ನೂ ಇದೇ ಕೃತಿಗೆ ಕವಿ ಆರೀಫ್ ರಾಜಾ ಅವರು ಬೆನ್ನುಡಿ ಬರೆದಿದ್ದು,
‘ಪ್ರೇಮ, ಹೆಣ್ಣು, ವಿರಹ, ಜಾತಿ, ಧರ್ಮ, ಪ್ರಭುತ್ವ ಹಾಗೂ ವರ್ಗ ಅಸಮಾನತೆಗಳನ್ನು ಸಹಜವಾಗಿಯೇ ತನ್ನ ಆಸಕ್ತಿಯ ವಿಷಯಗಳನ್ನಾಗಿ ಮಾಡಿಕೊಳ್ಳಲು ಯತ್ನಿಸುತ್ತಿರುವ ಸ್ವಾಮಿ ಪೊನ್ನಾಚಿಯ ಸಾವೊಂದನ್ನು ಬಿಟ್ಟು ಸಂಕಲನದ ಕವಿತೆಗಳು’ ಈಗ ಕನ್ನಡದಲ್ಲಿ ಸಮಕಾಲೀನ ಎಂದು ಕರೆಯಲಾಗುತ್ತಿರುವ ಒಬ್ಬ ಯುವಕವಿಯ ಮೊದಲ ಸಂಕಲಮನದಲ್ಲಿ ಕಾಣಿಸಿಕೊಳ್ಳಬಹುದಾದ ಎಲ್ಲಾ ಬಗೆಯ ಹಸಿಬಿಸಿ ಸಿಟ್ಟುಸೆಡವಿನ ಗುಣಲಕ್ಷಣಗಳನ್ನು ಒಳಗೊಂಡಿದೆ. ಈ ಮೂಲಕ ತನ್ನಕಾಲದ ಸಾಂಸ್ಕೃತಿಕ ನುಡಿಗಟ್ಟಿನೊಳಗೆ ಪ್ರವೇಶ ಪಡೆಯಲು ಸಜ್ಜಾಗಿ ನಿಂತಿದೆ ಎನ್ನುತ್ತಾರೆ.