‘ಕೆಡಹಬಲ್ಲರು ಅವರು ಕಟ್ಟಬಲ್ಲೆವು ನಾವು’ ಅಲ್ಲಮ ಪ್ರಭು ಬೆಟ್ಟದೂರು ಅವರ ಕವನಸಂಕಲನವಾಗಿದೆ. ಮಾಡಬೇಕಾದ ಸತ್ಕಾರ್ಯವನ್ನು ಮಾಡದೆ ಮಾಡಬಾರದ ದುಷ್ಕೃತ್ಯಗಳಿಗೆ ಕೈಹಾಕಿದಾಗ ಇಂಥ ಕವನಗಳು ಸಿಡಿಮಿಡಿಗುಟ್ಟುತ್ತ ಸಿಡಿಯುತ್ತವೆ. ಬಂಡಾಯ ಪ್ರವೃತ್ತಿಯ ಇಲ್ಲಿನ ಎಲ್ಲ ಕವನಗಳೂ ಈ ದೇಶವನ್ನು ಸರಿಪಡಿಸಲಾರದವರ ಮೇಲೆ ಹಾಯುತ್ತಲೇ ಮುನ್ನುಗ್ಗಿವೆ. ಕವಿಯ ಭಾಷೆ ಬಿಲ್ಲಿನಿಂದ ಬಿಟ್ಟ ಬಾಣದಂತೆ ನೇರ ಹಾಗೂ ವೇಗವುಳ್ಳದ್ದು. ಜನಸಾಮಾನ್ಯರನ್ನು ಸಹೃದಯರನ್ನು ತಲುಪುವುದೊಂದೇ ಅದರ ಗುರಿ. ಕವಿತೆಗಳೊಂದಿಗೆ ಕೆಲವು ಚುಟುಕುಗಳೂ ಇವೆ.
ಅಲ್ಲಮ ಪ್ರಭು ಬೆಟ್ಟದೂರು ಅವರು 1951 ಜೂನ್ 30ರಂದು ಕೊಪ್ಪಳದಲ್ಲಿ ಜನಿಸಿದರು. ಗವಿ ಸಿದ್ದೇಶ್ವರ ಕಾಲೇಜಿನ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಬಂಡಾಯ ಸಂಘಟನೆಯಲ್ಲಿ ಆಸಕ್ತಿಯಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ಚಟುವಟಿಕೆಯಿಂದಿದ್ದಾರೆ. ಕವಿತೆ ಹಾಗೂ ಪ್ರಬಂಧ ರಚನೆ ಇವರ ಆಸಕ್ತಿ ವಲಯ. ಅಲ್ಲಮಪ್ರಭು ಅವರ ಪ್ರಮುಖ ಕೃತಿಗಳೆಂದರೆ ಕಟ್ಟಬಲ್ಲೆವು ನಾವು ಕೆಡಹಬಲ್ಲರು ಅವರು, ಇದು ನನ್ನ ಭಾರತ, ಕುದುರೆ ಮೋತಿ ಮತ್ತು ನಿಲುಗಿರಿ (ಕವನ ಸಂಕಲನಗಳು) ಮುಂತಾದವು. ...
READ MORE