‘ಒಲವಿನ ಒಲಂಪಿಕ್ಸ್’ ಎಚ್. ಡುಂಡಿರಾಜ್ ಅವರ ದಾಂಪತ್ಯ ಬಗ್ಗೆಗಿನ ಹನಿಗವನ ಸಂಕಲನವಾಗಿದೆ. ಕೃತಿಯಲ್ಲಿ ಲೇಖಕರ ಬೆನ್ನುಡಿಯ ಬರಹ ಹೀಗಿದೆ; ಒಲವಿನ ಒಲಂಪಿಕ್ಸ್ ಎಂಬ ಈ ಸಂಕಲನದಲ್ಲಿ ನಾನು ದಾಂಪತ್ಯದ ವಿವಿಧ ಮುಖಗಳನ್ನು ಕಿರುಗವನಗಳಲ್ಲಿ ಹಿಡಿದಿಡುವ ಕಿರು ಪ್ರಯತ್ನವನ್ನು ಮಾಡಿದ್ದೇನೆ. ಇವುಗಳಲ್ಲಿ ಸಿಹಿ-ಕಹಿ, ನಗೆ-ಧಗೆ ಎರಡೂ ಇವೆ. ಇದು ನನ್ನೊಬ್ಬನ ಅನುಭವವಲ್ಲ ಜೀವನ ನಾಟಕದ ದಾಂಪತ್ಯವೆಂಬ ಅಂಕದಲ್ಲಿ ನಾನು ಪಾತ್ರಧಾರಿಯಾಗಿ ಉಂಡದ್ದು ಮತ್ತು ಪ್ರೇಕ್ಷಕನಾಗಿ ಕಂಡದ್ದು ಎರಡೂ ಇಲ್ಲಿನ ಕವನಗಳಿಗೆ ಪ್ರೇರಣೆಯಾಗಿವೆ. ದಾಂಪತ್ಯದ ಬೆರಗು ಹಾಗೂ ಕೊರಗನ್ನು ಕಿರುಗವನಗಳಲ್ಲಿ ಸೆರೆ ಹಿಡಿಯುವ’ ಒಲವಿನ ಒಲಂಪಿಕ್ಸ್ ‘ಕಾವ್ಯ ಪ್ರಿಯರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು ಎಂದಿದ್ದಾರೆ.
ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ. ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. 2011ರಲ್ಲಿ ನಡೆದ ಸಂಯುಕ್ತ ಅರಬ್ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...
READ MORE