‘ನ್ಯಾಣ’ ಕವಿತೆಗಳು ಕವಿ, ಕಲಾವಿದ ಕಿರಣ ಗಿರ್ಗಿ ಅವರ ಚೊಚ್ಚಲ ಕವನ ಸಂಕಲನ. ಈ ಕೃತಿಗೆ ನಟ, ರಂಗಕರ್ಮಿ ಮಂಡ್ಯ ರಮೇಶ್ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ.. ‘ನಾ ಹಾಡಲಾರೆ ಒಲವಿರದ ಸಾಲು..’ ಗೆಳೆಯ ಕಿರಣ್ ಗಿರ್ಗಿ ಅವರನ್ನು ನೀವು ಈಗಾಗಲೇ ನೋಡಿದ್ದರೇ, ಈ ಕವನಗಳಲ್ಲಿರುವ ಸ್ಥಳ, ಪಾತ್ರ, ವಸ್ತು, ಸಂದರ್ಭಗಳೆಲ್ಲವೂ ಅವರೇ ಅಂತ ಸ್ಪಷ್ಟವಾಗಿ ಅನಿಸುತ್ತದೆ. ನೋಡಿಲ್ಲವಾದರೇ ಅವರ ಇಡೀ ವ್ಯಕ್ತಿ ಪರಿಚಯ ಮತ್ತು ಪೂರ್ವಾಪರಗಳೆಲ್ಲ ಸರಳವಾಗಿ ಅನಾವರಣವಾಗುತ್ತದೆ ಎನ್ನುತ್ತಾರೆ ಮಂಡ್ಯ ರಮೇಶ್. ಪ್ರತಿ ಅಕ್ಷರ- ಸಾಲು - ಪದಗಳಲ್ಲಿ ಅವರು ಅಷ್ಟು ಜೀವಿಸಿ ಬಿಟ್ಟಿದ್ದಾರೆ. ರಂಗಭೂಮಿಯವರಾಗಿದ್ದರಿಂದ ಮತ್ತೂ ಸೂಕ್ಷ್ಮವಾಗಿ ಜಗತ್ತನ್ನು ಗ್ರಹಿಸಲು ಅವರಿಗೆ ಸಾಧ್ಯವಾಗಿದೆ. ನ್ಯಾಣ ಸಂಕಲನದಲ್ಲಿ ಎಲ್ಲಾ ಕವಿತೆಗಳಲ್ಲೂ ಕಾಣಿಸಿಕೊಳಅಳುವ ನಾಟ್ಯೀಕರಣ ಮತ್ತು ಕವಿತ್ವ ಸಹಜವಾಗಿ, ಅತ್ಯಂತ ಭಾವುಕತೆಯೊಂದಿಗೆ ವಾಸ್ತವದ ಕ್ರೌರ್ಯಗಳನ್ನು ಪ್ರಾಮಾಣಿಕವಾಗಿ ದೇಸೀ ಪದಗಳಲ್ಲಿ ಅಭಿವ್ಯಕ್ತಿಸಿರುವುದು ಅವರ ಶಕ್ತಿಯಾಗಿದೆ. ಹಳ್ಳಿ ಹುಡುಗನೊಬ್ಬನ ನಾಟಕದ ಶಕ್ತಿಯಲ್ಲೇ ತನ್ನ ಅನುಭವವನ್ನು ಕಾವ್ಯಾತ್ಮಕವಾಗಿ ಹೇಳುವ ಉತ್ಸಾಹ ಉದ್ದಕ್ಕೂ ಕಾಣಸಿಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಮತ್ತು ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದವರಾದ ಕಿರಣ್ ಗಿರ್ಗಿ (1992) ಸೃಜನಶೀಲ ರಂಗ ನಿರ್ದೇಶಕ, ನಟ, ಸಂಗೀತ ಸಂಯೋಜಕ ಹಾಗೂ ಕವಿ. 'ನ್ಯಾಣ' ಕವಿತೆಗಳು ಇವರ ಚೊಚ್ಚಲ ಸಾಹಿತ್ಯ ಕೃತಿ. ಕಿರಣ್ ಕುಮಾರ್ ಎಸ್.ಕೆ. ಎಂಬುದು ಇವರ ಮೂಲ ಹೆಸರಾಗಿದ್ದರೂ ಕಿರಣ್ ಗಿರ್ಗಿ ಅಂತಲೇ ಚಿರಪರಿಚಿತರು. ಶಿಕ್ಷಣದಲ್ಲಿ ಡಿಪ್ಲೋಮಾ (ಡಿ.ಎಡ್.) ವಿದ್ಯಾರ್ಹತೆ ಹೊಂದಿದ ಇವರು ಮೈಸೂರಿನ "ಭಾರತೀಯ ರಂಗ ಶಿಕ್ಷಣ ಕೇಂದ್ರ-ರಂಗಾಯಣ"ದಲ್ಲಿ 2012-13ನೇ ಸಾಲಿನ ರಂಗಾಭ್ಯಾಸಿಯಾಗಿ 'ಡಿಪ್ಲೊಮಾ ಇನ್ ಥಿಯೇಟರ್ ಎಜುಕೇಷನ್' ಕೋರ್ಸ್ ಮುಗಿಸಿ ರಂಗಾಯಣದ ಕಿರಿಯ ಕಲಾವಿದರಾಗಿ, ತಂತ್ರಜ್ಞರಾಗಿ ಕೆಲಸ ನಿರ್ವಹಿಸಿದ್ದಾರೆ. 'ಕೋಳಿ ಎಸ್ರು', ...
READ MORE