‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’ ಟೊಟೊ ಪ್ರಶಸ್ತಿ ಪುರಸ್ಕೃತ ಯುವ ಬರಹಗಾರ್ತಿ ಮೌಲ್ಯಸ್ವಾಮಿ ಅವರ ಚೊಚ್ಚಲ ಕವನ ಸಂಕಲನ. ಈ ಹಿರಿಯ ಪತ್ರಕರ್ತ, ಸಾಹಿತಿ ಜಿ.ಪಿ. ಬಸವರಾಜು ಅವರು ಮುನ್ನುಡಿ ಬರೆದಿದ್ದಾರೆ. ಈ ಸಂಕಲನದಲ್ಲಿ ಒಂದು ಶ್ರುತಿ ತಪ್ಪಿದ ಚರಮಗೀತೆ, ಕತ್ತಲು ಮೌನದ ಮುನಿಸ ಸದ್ದು, ಹೊಸ ನಾಳೆಯ ಗೀತೆ, ನದಿ ಧ್ಯಾನ, ಗೋಡೆಗಳು ಸುಧಾರಿಸುವುದಿಲ್ಲ, ಏಕತಾರಿ, ಶೀರ್ಷಿಕೆ ಬೇಡದ ಬಿಕ್ಕು, ಬಾನೆತ್ತರದ ಬೇಲಿ, ಅಮ್ಮನೆಂದರೆ, ಮತ್ತೆ ಸಂಧಿಸುತ್ತೇನೆ, ಖರ್ಚಾಗದ ಮೌನಗಳು, ಒಂದು ಖಾಸಗಿ ಪ್ರಮಾಣವು, ಕರುಣಾಳು ಜಗದ ಅಪ್ಪಣೆ, ದೂರದ ಹೆಜ್ಜೆ, ಮರುಭೂಮಿಯ ಗಾಯನಕೆ, ಕಾಯ್ವ ವಾದ್ಯ, ಅವನಿಷ್ಟದ ಅಡುಗೆ, ದೇವಲೋಕದ ತೃಪ್ತ ನಗು, ಅಪ್ಪ, ಕಾದ ಸಮುದ್ರ, ಗತದ ಗೋಲಕ, ಇಲ್ಲದ ಹಾದಿ, ಸುಖವೆಂದರೆ, ದುಗುಡ, ಬೊಗಸೆ, ರೆಕ್ಕೆ ಮತ್ತು. ಸುಡುವ ಹಾಡು, ಹೀಗೊಂದು ಆಹ್ವಾನ, ಗತಗಳು ಸಾಯುವುದಿಲ್ಲ, ಚಲನೆ, ಆತ್ಮಾಹುತಿ ನಾಳೆಗಳು, ಗಾಯದ ನೆರಳು, ಪಥ್ಯವಿಲ್ಲದ ಪಾಪಗಳು, ನಾಳೆಗಳು ಖರೀದಿಯಾಗಿವೆ, ಜೋತು ಬಿದ್ದಿಹ ಆತುಮ, ಉರಿವ ಉಡಿಯಲಿ, ಕನ್ನಡಿಯ ಸಾಕ್ಷಿ, ಒಂದು ಪುರಾತನ ಕನಸು, ಪ್ರತಿರೋಧ, ಅಸ್ಪೃಶ್ಯ ಕತ್ತಲು, ಬೇಸರದ ಬಾವಲಿಗಳಿಗೆ, ಪುನೀತ ಪಾಪಗಳು, ಕರುಳ ಮೌನ, ಅರಗಿನ ಹೂ, ಕನಲುವ ಕಡಲು, ಚಿಟ್ಟೆ ಮತ್ತು ಕತ್ತರಿ ಹೀಗೆ ವಿವಿಧ ಕವನಗಳು ಸಂಕಲನಗೊಂಡಿವೆ.
ಲೇಖಕಿ ಮೌಲ್ಯ ಸ್ವಾಮಿ ಅವರು ಮೂಲತಃ ಮೈಸೂರಿನವರು. ಕನ್ನಡ ಕಾವ್ಯ ಪರಂಪರೆಗೆ ತೆರೆದುಕೊಳ್ಳುತ್ತಿರುವ ಹೊಸ ದನಿ ಮೌಲ್ಯ ಸ್ವಾಮಿ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅವರಿಗೆ 2015ನೇ ಸಾಲಿನ ಟೊಟೊ ಪುರಸ್ಕಾರ ಲಭಿಸಿದೆ. ರಂಗಭೂಮಿಯಲ್ಲಿಯೂ ಗುರುತಿಸಿಕೊಂಡಿರುವ ಮೌಲ್ಯಸ್ವಾಮಿ, ಹಲವು ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ಜನಮಿತ್ರ ಕಾವ್ಯಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದು, ಸಂಚಯ ಕಾವ್ಯ ಬಹುಮಾನ ಪಡೆದಿದ್ದಾರೆ. ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’ ಮೌಲ್ಯಸ್ವಾಮಿ ಅವರ ಚೊಚ್ಚಲ ಕವನ ಸಂಕಲನ. ...
READ MORE