ವಿಭಿನ್ನ ಕಾವ್ಯವಸ್ತುಗಳನ್ನಿಟ್ಟುಕೊಂಡು, ಇಂದಿನ ಜಾಗತಿಕ ವಿದ್ಯಾಮಾನವನ್ನು ಪ್ರಶ್ನಿಸುತ್ತಾ, ಅರ್ಥೈಸುವ ಪ್ರಯತ್ನವನ್ನು ಕವಿ 'ನಿನ್ನ ಪ್ರೀತಿಯ ಹಿಂದೆ ' ಕವನ ಸಂಕಲನದಲ್ಲಿ ಮಾಡಿದ್ದಾರೆ. ಇಲ್ಲಿ ಕೇವಲ ಜಾಗತಿಕ ವಿದ್ಯಾಮಾನ ಮಾತ್ರವಲ್ಲ, ಪ್ರೀತಿ, ಕಳಕಳಿ, ಬದುಕು, ಸಮಾಜ ಎಲ್ಲಾ ವಲಯಗಳ ವಿಷಯವಸ್ತುಗಳಿಗೆ ಕವಿ ಕವಿತೆ ರೂಪ ನೀಡಿದ್ದಾರೆ. ಹಿರಿಯ ಸಾಹಿತಿ ದೊಡ್ಡರಂಗೇಗೌಡರು ಮುನ್ನುಡಿಯಲ್ಲಿ ಬರೆಯುತ್ತಾ ಹಲವು ಬಗೆಯ ವಸ್ತು ವಿಷಯ ವಿಚಾರಗಳನ್ನು ಹೊತ್ತು ತಂದಿರುವ ಕೃತಿ ಇದಾಗಿದೆ. ಬಹು ಬಗೆಯಲ್ಲಿ ಚೆನ್ನಾಗಿ ಓದಿಸಿಕೊಂಡು ಹೋಗುವ, ಕತೂಹಲ ಹುಟ್ಟಿಸುವ , ಪ್ರೀತಿಯ ವಿವಿಧ ಮಾನವೀಯ ಕಳಕಳಿ ಇರುವ ವಿಶಿಷ್ಟ ಬಗೆಯ ಕವನ ಸಂಕಲನವಾಗಿದೆ. ಎಂದಿದ್ದಾರೆ. ಇದು ಕವಿಯ ಬರವಣಿಗೆ ಶೈಲಿಯನ್ನು ವಿವರಿಸುತ್ತದೆ.
ವೃತ್ತಿಯಲ್ಲಿ ಕನ್ನಡ ಅಧ್ಯಾಪಕರಾಗಿರುವ ಕವಿ, ಸಾಮಾಜಿಕ ಚಿಂತಕ, ಸಿಸಿರಾ ಕಾವ್ಯನಾಮದ ಮೂಲಕ ಪರಿಚಿತರಾದ ಎಸ್.ರಾಮಲಿಂಗೇಶ್ವರ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವವರು. ...
READ MORE