ಬಾಳಿನೆಡೆಗೆ-ಡಾ. ಕೆ. ಶಶಿಕಾಂತ ಅವರ ಎರಡನೇ ಕವನ ಸಂಕಲನ. 30 ಕವನಗಳು ಸಂಕಲನಗೊಂಡಿವೆ. ಪ್ರೊ. ಜಿ.ವಿ. ಕೆಂಚನಗುಡ್ಡ ಅವರು ಕೃತಿಗೆ ಬೆನ್ನುಡಿ ಬರೆದು ‘ವಚನ ಸಾಹಿತ್ಯದಲ್ಲಿ ಕವಿಗೆ ಸಾಕಷ್ಟು ಅಧ್ಯಯನವಿದ್ದು, ಇಲ್ಲಿಯ ಬಸವ ಬಳಗದ ಧಾತ್ರಿಗೆ, ಜೋಳಿಗೆಯ ಸಂತ, ತುಂಗ ಮಹಾಂತ ಇತ್ಯಾದಿ ಕವನಗಳಲ್ಲಿ ವಚನಗಳ ಛಾಯೆ ಕಾಣಬಹುದು. ಕವಿಯ ಮೇಲೆ ತಾಯಿಯ ಪ್ರಭಾವ ದಟ್ಟವಾಗಿದೆ. ಬದುಕಿನ ಬಗೆಗಿರುವ ಕವಿಯ ನೋವು-ನಿರಾಶೆ ಇದೆ., ಆದರೆ, ಪಲಾಯನ ಮಾಡುವುದಿಲ್ಲ. ನೋವಿಗೆ ಮಿಡಿಯುವ, ಎದುರಿಸುವ ಛಲ ಕವನಗಳಲ್ಲಿ ವ್ಯಕ್ತವಾಗಿದೆ. ಪ್ರೀತಿ, ರಾಜಕೀಯ, ವೈಚಾರಿಕತೆ ಇವು ಕಾವ್ಯ ವಸ್ತುಗಳಾಗಿವೆ. ಕವನಗಳು ಸರಳವಾಗಿ ಓದಿಸಿಕೊಂಡು ಹೋಗುತ್ತವೆ. ವಿಚಾರ ಮಾಡಲು ಪ್ರೇರೇಪಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಸಂಶೋಧಕ ಕೆ. ಶಶಿಕಾಂತ ಅವರು ಮೂಲತಃ ರಾಯಚೂರ ಜಿಲ್ಲೆಯ ಲಿಂಗಸೂಗೂರಿನ ಕಸಬಾ ಲಿಂಗಸೂಗೂರು ಗ್ರಾಮದವರು. ಕಾಡ್ಲೂರು ಇವರ ಮನೆತನದ ಹೆಸರು. ಎಂ.ಎ., ಪಿ.ಎಚ್.ಡಿ ಪದವೀಧರರು. ಸದ್ಯ ಲಿಂಗಸೂಗೂರಿನ ಶ್ರೀಸಂಗಮೇಶ್ವರ ಕಲಾ ಮತ್ತು ಬಿ.ಬಿ.ಎಂ. ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ಸಂಪಾದನೆ, ಕಾವ್ಯ, ಸಂಶೋಧನೆ, ವಿಮರ್ಶೆ, ವಚನ ಸಾಹಿತ್ಯ ಸಂಪಾದನೆ ಇವರ ಆಸಕ್ತಿಯ ಕ್ಷೇತ್ರಗಳು. ಕೃತಿಗಳು: ಪ್ರಿಯದರ್ಶಿನಿ (ಸಂಶೋಧನಾ ಲೇಖನಗಳ ಸಂಪಾದನೆ), ನಮ್ಮ ಮಠಗಳ ನಿಕಷ (ಸಂಶೋಧನೆ-2000), ಘನಮಠದಾರ್ಯರ ತತ್ವಪದಗಳು,(ಎಂ.ಫಿಲ್., ಕಿರುಪ್ರಬಂಧ), ದಾಸೋಹ ಸ್ಮರಣ ಸಂಚಿಕೆ, ಷಡಕ್ಷರ ಅಭಿನಂದನ ಗ್ರಂಥ, ಚಿಜ್ಯೋತಿ-ಸ್ಮರಣ ಸಂಚಿಕೆ, ಘನಮಠ ಶಿವಯೋಗಿಗಳ ಸ್ವರವಚನ, ಸ್ವರ್ಣಪ್ರಭೆ, ಚೆಂಬೆಳಕು(ಸಂಪಾದನೆ), ಇಟಗಿ ಮಹಾದೇವ ದೇವಾಲಯ, ಗುಡಗುಂಟಿ ...
READ MORE