`ಅಮೃತಧಾರೆ’ ಕೃತಿಯು ಲಲಿತಾ ಮಹಾಂತೇಶ ಅರಳಿ ಅವರ ಗಝಲ್ ಸಂಕಲನವಾಗಿದೆ. ಇಲ್ಲಿ ಆದಿಪ್ರಾಸ, ಸಮಪ್ರಮಾಣದ ಕಾಫಿಯಾಗಳು, ಮನಸೆಳೆವ ರದೀಫ್ ಒಳಗೊಂಡ ಮುರದ್ದಫ್, ಗೈರ ಮುರದ್ದಪ್ ಗಝಲ್, ಚಿತ್ರಕ್ಕೆ ಗಝಲ್, ಚೋಟಿ ಬೆಹರ್ ಗಜಲ್ ಮತ್ತು ಕೆಲವು ಮಹಾತ್ಮರ ಬಗ್ಗೆ ಗಝಲ್ ಗಳಿವೆ. ಬಹುಕಾಲ ಮನದಲ್ಲಿ ರಿಂಗಣಿಸಿ ಬದುಕಿನ ಅನೇಕ ಸಮಸ್ಯೆಗಳಿಗೆ ಉತ್ತರವಾಗಿ ನಿಲ್ಲುತ್ತವೆ.
ಲಲಿತಾ ಮಹಾಂತೇಶ ಅರಳಿ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ತಂದೆ ಶಿವಪ್ಪ, ತಾಯಿ ಕಾಶಮ್ಮ. ಉಮಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ, ಮುಗಿಸಿ ಅದೇ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಪಡೆದರು. ಉರ್ದು ಮೂಲದ ಹಲವಾರು ಗಝಲ್ ಗಳಿಗೆ ಕನ್ನಡದ ಸ್ವಾದವನ್ನು ನೀಡಿರುತ್ತಾರೆ. ಕೃತಿಗಳು: ಅಮೃತಧಾರೆ ...
READ MORE