ಲೇಖಕಿ ಜ್ಯೋತಿ ಡಿ. ಬೊಮ್ಮಾ ಅವರ ಕವನ ಸಂಕಲನ-ನನ್ನೊಳಗಿನರಿವು. ಒಟ್ಟು 50 ಕವನಗಳಿವೆ. ಸಾಹಿತಿ ಬಸವರಾಜ ಐನೋಳಿ ಅವರು ಮುನ್ನುಡಿ ಬರೆದು ‘ ಇಲ್ಲಿಯ ಕವಿತೆಗಳಲ್ಲಿ ಗೋಜು-ಗೊಂದಲಗಳಿಲ್ಲ. ಕವಲು ದಾರಿಗಳಿಲ್ಲ. ಎಲ್ಲ ವಯೋಮಾನದವರು ಓದಿ ತಿಳಿದುಕೊಳ್ಳಬಹುದು. ಬಹುತೇಕ ಕವನಗಳಲ್ಲಿ ಸ್ತ್ರೀ ಸಂವೇದನೆ ಇದೆ. ಕೇವಲ ಸಮಸ್ಯೆಗಳು ಅಲ್ಲದೇ ಪರಿಹಾರಗಳೂ ಇವೆ. ಬದುಕಿನ ವಿಭಿನ್ನ ಮುಖಗಳನ್ನು ಅನಾವರಣಗೊಳಿಸಿದ್ದಾರೆ. ಸರಳ ಶಬ್ದಗಳಿಗೆ ಪದ್ಯವಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ಜ್ಯೋತಿ ಡಿ. ಬೊಮ್ಮಾ(ಜ್ಯೋತಿ ಡಾ.ಧನರಾಜ್ ಬೊಮ್ಮಾ) ಮೂಲತಃ ಬೀದರ ಜಿಲ್ಲೆಯವರು. ಬಿ.ಕಾಂ. ಹಾಗೂ ಎಲ್ ಎಲ್ ಬಿ ಪದವೀಧರೆ. ಸದ್ಯ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ವಾಸವಿದ್ದಾರೆ. ಕೃತಿಗಳು: ನಮ್ಮೊಳಗಿನರಿವು (ಕವನ ಸಂಕಲನ) ಪರಿಧಿ (ಕವನ ಸಂಕಲನ) ...
READ MORE