`ನೀರ ಮೇಲಣ ನೆರಳು' ಮಧುರಾ ಮೂರ್ತಿ ಅವರ ಕವನ ಸಂಕಲನವಾಗಿದೆ. ಪ್ರಸ್ತುತ ಸಮಾಜದ ಎಲ್ಲ ವಿಷಯಗಳ ಕುರಿತ ಕವನಗಳು ಇಲ್ಲಿದ್ದು, ಇವುಗಳು ಪ್ರೀತಿ, ಸ್ನೇಹ, ಮನುಷ್ಯ ಸಂಬಂಧ, ಅಂತಃಕರಣ, ಅನುಭೂತಿ, ಜವಾಬ್ಬಾರಿಯ ಹಲವು ರೂಪಕಗಳಾಗಿವೆ. ಪ್ರತೀ ಕವನದಲ್ಲಿ ಹೊಸತನವಿದೆ. ಇಲ್ಲಿನ ‘ಅರಿತು ಬಾಳು’, ‘ಬುದ್ಧನಂತಾಗಲಿಲ್ಲ’, ‘ನೀನಿರದ ಮೇಲೆ, ‘ಸಾಕ್ಷಾತ್ಕಾರ’, ‘ಆತ್ಮದ ಗೋಳು,’ ಮುಂತಾದ ಕವಿತೆಗಳು ಮತ್ತೆ ಮತ್ತೆ ಓದುವಂತಿವೆ. ಮೂರು ಅಥವಾ ನಾಲ್ಕು ಸಾಲಿನೊಳಗೆ ಪ್ರಮಾಣ ಬದ್ಧವಾಗಿ, ಛಂದೋಬದ್ಧವಾಗಿರುವ ಅನೇಕ ಕವಿತೆಗಳು ಲೇಖಕಿಯ ಆಸಕ್ತಿಯ ಗಜಲ್, ಹಾಯ್ಕು, ರುಬಾಯಿ, ಚೋಕಾ, ಅಬಾಬಿಗಳೆಂಬ ಪ್ರಕಾರಗಳೆಲ್ಲದರ ಮೂಸೆಯೊಳಗೆ, ಅನುಭವದ ಸಾರವನ್ನು ಅದ್ದಿ, ಎರಕ ಹೊಯ್ದು ತೆಗೆದಂತೆ ಭಾಸವಾಗುತ್ತದೆ.
ಕವಯತ್ರಿ ಮಧುರಾ ಎನ್. ಭಟ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡು ಗ್ರಾಮದವರು. ಹೊನ್ನಾವರದಲ್ಲಿ ವ್ಯಾಸಂಗ ಮಾಡಿದ್ದು, ಸದ್ಯ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ತಮ್ಮದೇ ಸಿ ಎನ್ ಸಿ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ ಹೊಂದಿದ್ದಾರೆ. ಗಝಲ್, ಕವಿತೆ, ಛಂದೋಬದ್ಧ ಕಾವ್ಯ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳ ರಚನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಕೃತಿಗಳು: ಮಧುರ, ಗೋಧೂಳಿ (ಗಜಲ್ ಸಂಕಲನಗಳು) ...
READ MORE