ಎದೆಯ ಸುಡುವ ನೆನಪುಗಳು

Author : ಎ.ಎಸ್. ಮಕಾನದಾರ

Pages 56

₹ 50.00




Year of Publication: 2007
Published by: ನಿರಂತರ ಪ್ರಕಾಶನ
Address: # ಮಾಸೂಮ್ ಮಂಜಿಲ್ , ಟೆಕ್ಕೇದ ಓಣಿ ಗಜೇಂದ್ರಗಡ 582 114 ಜಿಲ್ಲಾ :ಗದಗ

Synopsys

ಕವಿ- ಲೇಖಕ ಎ.ಎಸ್. ಮಕಾನದಾರ ಅವರ ಕವಿತೆ-ಚುಟುಕುಗಳ ಸಂಕಲನ-ಎದೆಯ ಸುಡುವ ನೆನಪುಗಳು. ಈ ಸಂಕಲನವು ಕಾವ್ಯ ಚಿತ್ರ ಕಲೆಯ ಜುಗಲ್ಬಂದಿ ಎಂಬ ಉಪಶೀರ್ಷಿಕೆ ಹೊಂದಿದೆ. ಇದು ಕವಿಯ ಮೊದಲ ಕವನ ಸಂಕಲನ. ಇಲ್ಲಿಯ ಕವಿತೆಗಳು ಕೇವಲ ಸಾಹಿತ್ಯದ ಶಾಸ್ತ್ರೀಯ ರೂಪಕಗಳಲ್ಲ. ಬದಲಾಗಿ ನಾಲ್ಕಾರು ಜನ ಕೂತು ಮಾತಾಡಿರಬಹುದಾದ ಪಿಸು ಧ್ವನಿಗಳಾಗಿವೆ. ಮಾನವ ಸಂಬಂಧಗಳು ಜಾಗತೀಕರಣಗೊಂಡು ಪ್ರೀತಿ ಯನ್ನು ಪೇಟೆಂಟ್ ಮಾಡುವ ಈ ನೆಲದಲ್ಲಿ ಇನ್ನೊಬ್ಬರಿಗಾಗಿ ಹಂಬಲಿಸುವ ಪ್ರೀತಿಗೆ ಸಾಕ್ಷಿ ಯಂತಿವೆ. ಈ ಪ್ರೀತಿಯ ಸಾಚಾತನದ ಬಗ್ಗೆ ಅನುಮಾನಿಸಲ್ಪಡುವವರು ಕೂಡ ಈ ಕವಿತೆಗಳಲ್ಲಿದ್ದಾರೆ. ಎಲ್ಲ ಜಾತಿಯ ಜನರು ತಮ್ಮ ಜಾತಿ ಧರ್ಮದ ನೆನಪಿಲ್ಲದೆ ಸಂತನೊಬ್ಬನ ಜಾತ್ರೆಗೆ ಸೇರುವಷ್ಟು ಈ ಕವಿತೆ ಗಳು ಮುಗ್ಧವಾಗಿವೆ. ಹಾಗಾಗಿ, ಇಲ್ಲಿನ ಕವಿತೆಗಳಲ್ಲಿ ಅಮಾಯಕತೆ ಇಲ್ಲ. ಜನರನ್ನು ವಂಚಿಸುವ ವ್ಯಾಪಾರಿ ವರ್ಗಕ್ಕೆ ಸಿಲುಕಿದ ಅಮಾಯಕ ಜನರ ಸಂಕಟ ಗಳಾಗಿವೆ.

ಅಪ್ಪಣ್ಣ,  ಎಷ್ಟೊಂದು ಕತ್ತಿಗಳು ಸೇರಿ ಕೊಂಡಿವೆ, ನಿನ್ನಹಸಬೆಯೊಳು ,ಆ ಕತ್ತಿಗಳೇ ಮಾಡಿದ ಕ್ಷೌರ ಹೇಗೆ ಸೂಚಿಸಿ ಬಿಡುತ್ತದೆ? ಆ ಚಾಂದ್ ದಾಡಿ ಮುಸ್ಲಿಮನದು, ಆ ಜುಟ್ಟು ಬ್ರಾಹ್ಮಣನದೆಂದು, ಆ ಕೆಳದಾಡಿ ಸಿಖ್ ನದೆಂದು, ಆ ಫ್ರೆಂಚ್ ದಾಡಿ ಕ್ರಿಶ್ಚನ್ ದೆಂದು, .... ಎಲ್ಲವನ್ನೂ ಬೊಳಿಸಿಟ್ಟು ಹೊಸದೊಂದು ವ್ಯವಸ್ಥೆ ನಿರ್ಮಿಸ ಬಾರದೇ ......ಅಂತೆಯೇ ಎಸೆದು ಬಿಡಲು ಹೇಳು ಎಲ್ಲ ಸಹೋದರರಿಗೆ ಈ ಜಾತಿ ಸೂಚಕ ಕತ್ತಿಗಳನ್ನು...

ವಿಶೇಷ ಕಾವ್ಯ ಗುಣದಿಂದ ಗಮನ ಸೆಳೆಯುತ್ತವೆ. ಹಿರಿಯ ಕವಿ ಜರಗನಹಳ್ಳಿ ಶಿವಶಂಕರ ಅವರ ಮುನ್ನುಡಿ ಡಾ. ಅಯ್.ಜೆ ಮ್ಯಾಗೇರಿ ಅವರ ಬೆನ್ನುಡಿ ಕಲಾವಿದ ಎಂ ಕಮಲ್ ಅವರ ಬಳಕುವ ರೇಖೆಗಳು ಗಮನ ಸೆಳೆಯುತ್ತವೆ

About the Author

ಎ.ಎಸ್. ಮಕಾನದಾರ

ಲೇಖಕ ಎ. ಎಸ್. ಮಕಾನದಾರ ಅವರ ಹುಟ್ಟೂರು ಗಜೇಂದ್ರಗಡ. ಪ್ರಸ್ತುತ ಗದುಗಿನ ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 10 ಸ್ವತಂತ್ರ ಕೃತಿಗಳನ್ನು, 16 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಎಸ್.ಡಬ್ಲೂ ಮೊದಲ ಸೆಮಿಸ್ಟರ್ ಗೆ ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ’ ಎಂಬ ಇವರ ಕವಿತೆ ಪಠ್ಯ ವಾಗಿ ಸೇರ್ಪಡೆ ಯಾಗಿದೆ.  ಪ್ರಶಸ್ತಿ-ಗೌರವಗಳು:  ಸರಕಾರದಿಂದ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಸಂತ ಶಿಶುನಾಳ ಶರೀಫ ಪುರಸ್ಕಾರ, ಭಾವೈಕ್ಯ ಪುರಸ್ಕಾರ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪುರಸ್ಕಾರ, ಕೊಪಳ ...

READ MORE

Related Books