ಕವಿ ಬ. ಶಿವಮೂರ್ತಿ ಶಾಸ್ತ್ರಿ ಅವರು ಬರೆದ ಕವನ ಸಂಕಲನ-ದುಂಬಿ. ಇವರ ಕಾವ್ಯನಾಮ-ಶೂಲಪಾಣಿ. ಈ ಸಂಕಲನದಲ್ಲಿ ಒಟ್ಟು 60 ಕವನಗಳಿವೆ. ಪ್ರಕೃತಿ ವರ್ಣನೆ, ಸಾಧಕರ ಗುಣಗಾನ, ದೇಶಮಾತೆಯ ಸ್ತ್ರೋತ್ರಗಳು, ಕೆಲವು ವಚನ ಮಾದರಿಯವು; ಕೆಲವು ದಾಸರ ಹಾಡಿನ ಮಾದರಿಯವು, ಕೆಲವು ಪ್ರಾಸಬದ್ಧ ಕವಿತೆಗಳು ಮತ್ತೂ ಕೆಲವುಗಳಿಗೆ ಪ್ರಾಸವೇ ಇಲ್ಲ; ತಮಗೆ ತಿಳಿದ ಹಾಗೆ ಬರೆದ ಕವನಗಳಾಗಿವೆ ಎಂದು ಕವಿಗಳೇ ಪ್ರಸ್ತಾವನೆಯಲ್ಲಿ ಹೇಳಿಕೊಂಡಿದ್ದಾರೆ. ಇಲ್ಲಿಯ ಬಹುತೇಕ ಕವಿತೆಗಳು ವಿವಿಧ ಪತ್ರಿಕೆಗಳಳ್ಲಿ ಪ್ರಕಟವಾಗಿವೆ.
ಶರಣ ಸಾಹಿತ್ಯ ವಿದ್ವಾಂಸ ಬಿ. ಶಿವಮೂರ್ತಿಶಾಸ್ತ್ರಿಗಳು ಬಸವಯ್ಯ ಹುಲಿಕುಂಟೆಮಠ- ನೀಲಮ್ಮ ದಂಪತಿ ಪುತ್ರರು. ತುಮಕೂರಿನಲ್ಲಿ 23-2-1903 ರಂದು ಜನಿಸಿದರು. ಗುಬ್ಬಿಯ ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. 1936ರಲ್ಲಿ ಮೈಸೂರು ಸಂಸ್ಥಾನದ ವಿದ್ವಾಂಸರಾದರು. ಸಾಹಿತ್ಯ ಪರಿಷತ್ತಿನ ಕನ್ನಡನುಡಿ ಮತ್ತು ಪರಿಷತ್ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ಮೈಸೂರು ಸರ್ಕಾರದ ಪ್ರತಿನಿಧಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿದ್ದರು. ಶರಣ ಸಾಹಿತ್ಯ ಮತ್ತು ಸ್ವತಂತ್ರ ಕರ್ನಾಟಕ ಪತ್ರಿಕೆಗಳ ಸ್ಥಾಪಕರೂ ಹೌದು. ಆಸ್ಥಾನ ವಿದ್ವಾನ್ ಬಿರುದಿನ ಜೊತೆಗೆ ಕೀರ್ತನ ಕೇಸರಿ ಎಂಬ ಬಿರುದೂ ಲಭಿಸಿತ್ತು.1966ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ದೊರಕಿತು. 1975ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ, ...
READ MORE