ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ

Author : ಜಗದೀಶ್ ಜೋಡುಬೀಟಿ

Pages 97

₹ 100.00




Year of Publication: 2023
Published by: ಚಂದು ಪುಸ್ತಕ
Address: ಹೆಬ್ಬಾಳ್‌, ಮೈಸೂರು

Synopsys

‘ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ’ ಕೆ.ಬಿ. ಜಗದೀಶ್‌ ಜೋಡುಬೀಟಿ ಅವರ ಕವನಸಂಕಲನವಾಗಿದೆ. ಕವಿತೆ ಬರೆಯಲು ಇನ್ನೇನು ಬೇಕು ಹೂತೊಂದು ಹುಣಸೆ ಮರ ಸಾಕು? ಎಂಬ ವರಕವಿ ಬೇಂದ್ರೆಯವರ ಮಾತು ಪ್ರಸ್ತುತ ಕವನ ಸಂಕಲನಕ್ಕೆ ಸೂಕ್ತವಾಗಿ ಒಪ್ಪುತ್ತದೆ. ಸೂರ್ಯನಿಂದ ಭೂಮಿಯವರೆಗೆ ನೆನಪುಗಳಿಂದ ಮರೆವಿನವರೆಗೆ, ಈ ಹೊತ್ತಿನಿಂದ ನಡುರಾತ್ರಿಯವರೆಗೆ, ಬಸಿರಿನಿಂದ ಗೋರಿಯವರೆಗೆ, ನಡುವೆ ಪ್ರೀತಿ, ನವಿಲುಗರಿ, ಅಂ- ಚೆಯ ಅಣ್ಣ, ಒಂದಿಷ್ಟು ಏಕಾಂತ, ಮಾರುಕಟ್ಟೆ, ಗಾಂಧಿಯನ್ನೂ ಬಿಡದೆ ಸಾರ್ವಜನಿಕ ಶೌಚಾಲಯದವರೆಗಿನ ಎಲ್ಲಾ ಸಣ್ಣ, ದೊಡ್ಡ ಸಂಗತಿಗಳು ಸ್ಥಾನಪಡೆದಿರುವ ಕೃತಿ ಜಗದೀಶ್ ಜೋಡುಬೀಟಿಯವರ “ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ” ದೀರ್ಘ ಕವನಗಳು, ಹನಿಗವನಗಳು ಸೇರಿದಂತೆ ಒಟ್ಟು 65 ಕವನಗಳು ಇಲ್ಲಿವೆ. ವೈವಿಧ್ಯಮಯ ವಸ್ತು ವಿಷಯಗಳನ್ನೊಳಗೊಂಡು ವರ್ತಮಾನದ ವಾಸ್ತವ ನೆನಪು ಪ್ರೀತಿ, ನಿರೀಕ್ಷೆ, ಭರವಸೆಗಳನ್ನು ತೆರೆದಿಡುತ್ತವೆ. ಈ ಹೊತ್ತಲ್ಲಿ ಇವೆಲ್ಲವುಗಳಲ್ಲಿ ನಾವು ಕಾಣುವ ಏಕಸೂತ್ರತೆ ಮುಕ್ತತೆ ಮತ್ತು ಬದ್ಧತೆಯ ವಿಚಾರಗಳಲ್ಲಿ ಸಾಮಾಜಿಕ ಆರೋಗ್ಯ ಮತ್ತು ಜವಾಬ್ದಾರಿಗಳು, ಕವಿ ಮೂಲತಃ ಕೊಡಗಿನ ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದರ ಛಾಯೆಯ ಸಂಕೇತ.

About the Author

ಜಗದೀಶ್ ಜೋಡುಬೀಟಿ

ಜಗದೀಶ್ ಜೋಡುಬೀಟಿ ಅವರು ಮೂಲತಃ ಕೊಡಗಿನವರು. ಅವರು ಕಾವ್ಯ ಪ್ರಕಾರಗಳಲ್ಲಿ ಆಸಕ್ತಿಯನ್ನು ಹೊಂದಿದ್ದು, ಈಗಾಗಲೇ ಹಲವು ಕವಿತೆಗಳನ್ನು ಬರೆದು, ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿರುತ್ತಾರೆ. ...

READ MORE

Related Books