‘ಹಿನ್ನೋಟದ ಕನ್ನಡಿ’ ಪ್ರವೇಶಿಕೆಗಳೊಂದಿಗೆ 70 ಕವಿತೆಗಳು, ಇದು ಹಿರಿಯ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಕವಿತೆಗಳನ್ನು ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಸಂಪಾದಿಸಿದ್ದಾರೆ. ಈ ಕೃತಿಗೆ ಎಚ್.ಎಸ್.ವೆಂಕಟೇಶಮೂರ್ತಿ ಜೊತೆಗೆ ಕೆ.ವಿ. ತಿರುಮಲೇಶ್ ಅವರು ಬೆನ್ನುಡಿ ಬರೆದಿದ್ದಾರೆ. ಬಿ.ಆರ್. ಲಕ್ಷ್ಮಣರಾವ್ ಅವರಿಗೆ ಭಾಷೆಯ ಸಮಸ್ಯೆಯಿಲ್ಲ. ದ್ವಂದ್ವಗಳಿದ್ದರೂ ವಿಕ್ಷಿಪ್ತತೆ ಇಲ್ಲ. ಚಂದವಾಗಿದ್ದರೂ ಅಲಂಕಾರಿಕವಾಗಿಲ್ಲ, ಕಾಳಜಿಯಿದ್ದರೂ ಕ್ರೌರ್ಯವಿಲ್ಲ, ಮಾತುಗಳಿದ್ದರೂ ಆರ್ಭಟವಿಲ್ಲ, ವಿರೋಧವಿದ್ದರೂ ವೈರವಿಲ್ಲ. ಒಟ್ಟಾರೆಯಾಗಿ ಒಂದು ತರದ ಪಾರದರ್ಶಕತೆ ಇಲ್ಲಿ ಕಾಣಿಸುತ್ತದೆ ಎನ್ನುತ್ತಾರೆ ಕೆ.ವಿ. ತಿರುಮಲೇಶ್.
ಎಲಿಯಟ್ ಇಂಗ್ಲಿಷನ್ನು ಬಳಸುವ ಲಾಲಿತ್ಯದಲ್ಲಿ ಬಿ.ಆರ್.ಎಲ್. ಕನ್ನಡವನ್ನು ಬಳಸುತ್ತಾರೆ. ಈ ಪಾರದರ್ಶಕತೆಯೂ ಅವರ ಅರ್ಬೇನಿಟಿಯ ಒಂದು ಗುಣ. ವ್ಯಕ್ತಿ ಮತ್ತು ಕವಿ ಒಬ್ಬನೇ ಆಗುವ ಪಾರದರ್ಶಕತೆ ಇದು. ಕವಿ ಪ್ರಾಮಾಣಿಕನಾಗುವುದು ಈ ಪಾರದರ್ಶಕತೆಯಿಂದಲೇ. ಕವಿತೆಯ ದೃಷ್ಟಿಯಿಂದ ಇದೊಂದು ದೊಡ್ಡ ಸಾಧನೆ ಎನ್ನುತ್ತಾರೆ ಕೆ.ವಿ. ತಿರುಮಲೇಶ್. ಈ ಕೃತಿಯಲ್ಲಿ ಬಿ.ಆರ್. ಲಕ್ಷ್ಮಣರಾವ್ ಅವರ 70 ಕವಿತೆಗಳೊಂದಿಗೆ ಅವುಗಳ ಪ್ರವೇಶಿಕೆಗಳನ್ನು ಚರ್ಚಿಸಲಾಗಿದೆ.
ಈ ಕೃತಿಯಲ್ಲಿ ಒಟ್ಟಾರೆಯಾಗಿ 70 ಅಧ್ಯಾಯಗಳನ್ನು ಒಳಗೊಂಡಿದ್ದು, ಪ್ರಸ್ತಾವನೆಯನ್ನು ಎಚ್. ಎಸ್. ವೆಂಕಟೇಶಮೂರ್ತಿ, ಮುನ್ನುಡಿ, ಕೆ. ವಿ. ತಿರುಮಲೇಶ್, ಕವಿಯ ಮಾತು : ಬಿ. ಆರ್. ಲಕ್ಷ್ಮಣರಾವ್, ಗೋಪಿ ಮತ್ತು ಗಾಂಡಲೀನ(ಪ್ರವೇಶಿಕೆ : ಎಂ. ಆರ್. ದತ್ತಾತ್ರಿ), ಪೋಟೋಗ್ರಾಫರ್(ಪ್ರವೇಶಿಕೆ : ಎಂ. ಆರ್. ದತ್ತಾತ್ರಿ), ಶಶಿಯ ಮೊರೆ(ಪ್ರವೇಶಿಕೆ : ಎಂ. ಆರ್. ದತ್ತಾತ್ರಿ), ಹಸಿರ ಹಾವು(ಪ್ರವೇಶಿಕೆ : ನಾಗರಾಜ ವಸ್ತಾರೆ). ಮನವಿ (ಪ್ರವೇಶಿಕೆ : ನಾಗರಾಜ ವಸ್ತಾರೆ), ವಿಹ್ವಲ(ಪ್ರವೇಶಿಕೆ : ನಾಗರಾಜ ವಸ್ತಾರೆ), ಟುವಟಾರ(ಪ್ರವೇಶಿಕೆ ; ಮಲ್ಲೇಪುರಮ ಜಿ. ವೆಂಕಟೇಶ), ಮಣ್ಣುಹುಳ(ಪ್ರವೇಶಿಕೆ : ಮಲ್ಲೇಪುರಂ ಜಿ. ವೆಂಕಟೇಶ), ನೆನಪು(ಪ್ರವೇಶಿಕೆ : ಜಿ. ವೆಂಕಟೇಶ), ಲೋಲೀಟಿ(ಪಿ.ಚಂದ್ರಿಕಾ), ರಗಳೆ(ಪ್ರವೇಶಿಕೆ : ಚಂದ್ರಶೇಖರ ಪಾಳ್ಯ), ತುರ್ತಿನ ಗುರ್ತುಗಳು(ಪ್ರವೇಶಿಕೆ : ಚಂದ್ರಶೇಖರ ತಾಳ್ಯ), ದಯವಿಟ್ಟು (ಪ್ರವೇಶಿಕೆ : ಚಂದ್ರಶೇಖರ ತಾಳ್ಯ), ಘಸ್ನಿ (ಪ್ರವೇಶಿಕೆ : ಸ. ರಘುನಾಥ), ನಿರಕ್ಷಕ ಕುಕ್ಷಿಗೆ(ಪ್ರವೇಶಿಕೆ : ಸ. ರಘುನಾಥ), ಕವಿತೆ(ಪ್ರವೇಶಿಕೆ : ನರಹಳ್ಳಿ ಬಾಲಸುಬ್ರಹ್ಮಣ್ಯ), ಸಂದಿಗ್ಧ(ಪ್ರವೇಶಿಕೆ : ನರಹಳ್ಳಿ ಬಾಲ ಸುಬ್ರಹ್ಮಣ್ಯ), ವಾ-ನರಗೀತೆ(ಪ್ರವೇಶಿಕೆ : ನರಹಳ್ಳಿ ಬಾಲಸುಬ್ರಹ್ಮಣ್ಯ) ಬೇಲಿ(ಪ್ರವೇಶೀಕೆ : ಎಸ್. ಆರ್. ವಿಜಯಶಂಕರ), ಹಿನ್ನೋಟದ ಕನ್ನಡಿ, ಲಿಲ್ಲಿಪುಟ್ಟಿಯ ಹಂಬಲ೯ಪ್ರವೇಶಿಕೆ : ಎಸ್. ಆರ್. ವಿಜಯಶಂಕರ), ಕಡಲ ತೀರದಲ್ಲಿ( ಪ್ರವೇಶಿಕೆ : ಎಸ್. ಆರ್. ವಿಜಯಶಂಕರ), ಸಂವಾದ(ಪ್ರವೇಶಿಕೆ : ಸಿ. ಎನ್. ರಾಮಚಂದ್ರನ್), ಕೊಲಂಬಸ್(ಪ್ರವೇಶಿಕೆ : ಸಿ.ಎನ್. ರಾಮಚಂದ್ರನ್), ಗಳಿಕೆ(ಪ್ರವೇಶಿಕೆ : ಎಚ್. ಎಸ್. ವೆಂಕಟೇಶಮೂರ್ತಿ), ದೇವರಿಗೆ ನಮಸ್ಕಾರ(ಪ್ರವೇಶಿಕೆ : ಎಸ್. ಎಸ್. ವೆಂಕಟೇಶಮೂರ್ತಿ), ವರ್ತಮಾನ(ಪ್ರವೇಶಿಕೆ : ಎಚ್. ಎಸ್. ವೆಂಕಟೇಶಮೂರ್ತಿ), ಗುಂಡಪ್ಪ ವಿಶ್ವನಾಥ್(ಪ್ರವೇಶಿಕೆ : ಎಚ್. ಎಸ್. ವೆಂಕಟೇಶಮೂರ್ತಿ), ಕ್ವಿಕ್ಸೋಟನ ಕೊನೆಯ ದಿನಗಳು(ಪ್ರವೇಶಿಕೆ : ಸುನ್ರಾಯ ಚೊಕ್ಕಾಡಿ), ಕೆಂಪು(ಪ್ರವೇಶಿಕೆ: ಸುಬ್ರಾಯ ಚೊಕ್ಕಾಡಿ), ಪರೀಕ್ಷಿತ(ಪ್ರವೇಶಿಕೆ : ಆರ್. ವಿಜಯರಾಘವನ್), ಅಂತರ್ಜಲ (ಪ್ರವೇಶಿಕೆ : ಆರ್. ವಿಜಯರಾಘವನ್), ರೀತಿ(ಪ್ರವೇಶಿಕೆ : ಆರ್. ವಿಜಯರಾಘವನ್), ಸ್ವಯಂವರ (ಪ್ರವೇಶಿಕೆ : ಎಂ. ಎಸ್. ಆಶಾದೇವಿ), ಏನೀ ಅದ್ಬುತವೇ (ಪ್ರವೇಶಿಕೆ : ಎಂ. ಎಸ್. ಆಶಾದೇವಿ), ಸ್ವಂತ (ಪ್ರವೇಶಿಕೆ : ಎಂ. ಎಸ್. ಆಶಾದೇವಿ), ಪರಿಧಿ(ಚಿಂತಾಮಣಿ ಕೂಡ್ಲೆಕೆರೆ), ಮಧ್ಯಸ್ಥ(ಚಿಂತಾಮಣಿ ಕೂಡ್ಲೆಕೆರೆ), ದೆಹಲಿ-1857(ಡಾ. ಜಿ.ಎಸ್. ಶಿವರುದ್ರಪ್ಪ), ರಿಪ್ ವ್ಯಾನ್ ವಿಂಕಲ್(ಪ್ರವೇಶಿಕೆ : ಶ್ರೀಧರ ಬಳಗಾರ), ಅಮ್ಮನಿಗೆ (ಪ್ರವೇಶಿಕೆ : ಶ್ರೀಧರ ಬಳಗಾರ), ಹೂವೆಂದರೆ(ಪ್ರವೇಶಿಕೆ : ಶ್ರೀಧರ ಬಳಗಾರ), ದ್ವಾ ಸುಪರ್ಣಾ( ಪ್ರವೇಶಿಕೆ : ವೈದೇಹಿ), ನೆಹರು ಜೈಲಿಗೆ ಹೋದದ್ದೇಕೆ?(ಪ್ರವೇಶಿಕೆ : ವೈದೇಹಿ), ಕಾಲ (ಪ್ರವೇಶಿಕೆ : ವೈದೇಹಿ), ಅದೇ ಹಾಡು)(ಪ್ರವೇಶಿಕೆ : ಎಂ.ಎನ್. ವ್ಯಾಸರಾವ್), ಪ್ರಿಸಮ್ (ಪ್ರವೇಶಿಕೆ : ಎಂ. ಎನ್ .ವ್ಯಾಸರಾವ್), ಕಿವಿಮಾತು( ಪ್ರವೇಶಿಕೆ : ಎಂ. ಎನ್ ವ್ಯಾಸರಾವ್), ನವಿಲು ಮತ್ತು ಮುಳ್ಳುಹಂದಿ(ಪ್ರವೇಶಿಕೆ : ಜಿ. ಎನ್. ರಂಗನಾಥರಾವ್), ಎಡೆ (ಪ್ರವೇಶಿಕೆ : ಜಿ. ಎನ್. ರಂಗನಾಥರಾವ್), ಗೆಲಿಲಿಯೊ( ಪ್ರವೇಶಿಕೆ : ರಾಘವೇಂದ್ರ ಪಾಟೀಲ), ಬಿಡುಗಡೆ(ಪ್ರವೇಶಿಕೆ : ರಾಘವೇಂದ್ರ ಪಾಟೀಲ), ಇವಳು ನದಿಯಿಲ್ಲ( ಪ್ರವೇಶಿಕೆ : ರಾಘವೇಂದ್ರ ಪಾಟೀಲ), ಈಗ( ಪ್ರವೇಶಿಕೆ : ರಾಘವೇಂದ್ರ ಪಾಟೀಲ), ಯೂಲಿಸಿಸ್ (ಪ್ರವೇಶಿಕೆ : ಕೆ ಸತ್ಯನಾರಾಯಣ), ಸ್ಥಿತಿ(ಪ್ರವೇಶಿಕೆ : ಮಲ್ಲಿಕಾರ್ಜುನ ಹಿರೇಮಠ), ರೂಪಾಂತರ(ಪ್ರವೇಶಿಕೆ : ಮಲ್ಲಿಕಾರ್ಜುನ ಹಿರೇಮಠ), ನಂಬಿಕೆ (ಪ್ರವೇಶಿಕೆ : ಮಲ್ಲಿಕಾರ್ಜುನ ಹಿರೇಮಠ)ಕಬಂಧ(ಪ್ರವೇಶಿಕೆ ಜೋಗಿ),ಜಿಜ್ಞಾಸೆ( ಪ್ರವೇಶಿಕೆ : ಜೋಗಿ), ಹೀಗೇ ಒಬ್ಬನ ಮೃತ್ಯುಪತ್ರ(ಪ್ರವೇಶಿಕೆ : ಜೋಗಿ), ಇವಳಿದ್ದಾಳೆ( ಪ್ರವೇಶಿಕೆ : ಎಚ್. ಡುಂಡಿರಾಜ್) ಇವೆಲ್ಲಾವುಗಳು ಈ ಕೃತಿಯಲ್ಲಿವೆ.
ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...
READ MORE