ಇಹದ ಸ್ವರ

Author : ಲಲಿತಾ ಸಿದ್ದಬಸವಯ್ಯ

Pages 43

₹ 60.00




Year of Publication: 2002
Published by: ಚಿನ್ಮಯಿ ಪ್ರಕಾಶನ
Address: #5217, ಗುರುಸನ್ನಿಧಿ, 2ನೇ ಕ್ರಾಸ್ ಅಶೋಕ ನಗರ, ತುಮಕೂರು-572102

Synopsys

ಲಲಿತಾ ಸಿದ್ದಬಸವಯ್ಯನವರ ಕವಿತೆಗಳ ಸಂಕಲನ ‘ಇಹದ ಸ್ವರ’. ನಿಜವಾದ ಕವಿತೆಯ ಮೊದಲ ಲಕ್ಷಣವೇನು ಎಂದು ಯಾರಾದರೂ ನನ್ನನ್ನು ಕೇಳಿದರೆ, ಓದಿದ ಕೂಡಲೇ ಅದು ನಮ್ಮ ಮನಸ್ಸನ್ನು ಸ್ವಲ್ಪ ಹೊತ್ತಿನವಗೆಗಾದರೂ ಹಿಡಿದು ನಿಲ್ಲಿಸಿಕೊಳ್ಳುವಂತಿರಬೇಕು ಎನ್ನುತ್ತೇನೆ ಎನ್ನುತ್ತಾರೆ ಜಿ.ಎಸ್. ಶಿವರುದ್ರಪ್ಪ. ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿರುವ ಅವರು ಲಲಿತಾ ಸಿದ್ಧಬಸವಯ್ಯನವರು ಕಳೆದ ವರ್ಷ(2001) ಪ್ರಕಟಿಸಿದ ಮೊದಲ ಸಿರಿ ಎಂಬ ಕವನ ಸಂಗ್ರಹದೊಳಗಿನ ಕೆಲವು ಕವಿತೆಗಳಲ್ಲಿ, ನಾನು ಮೇಲೆ ಪ್ರಸ್ತಾಪಿಸಿದ ನಿಜವಾದ ಕವಿತೆಯ ಲಕ್ಷಣಗಳನ್ನು ಗುರುತಿಸಿದ ಕಾರಣದಿಂದ ನಾನು ಅವರಿಗೆ ಬರೆದೆ: ನಿಮ್ಮ ಮೊದಲ ಕವನ ಸಂಗ್ರಹದ ಸಂದರ್ಭದಲ್ಲಿಯೇ ನೀವು ಎಂಥ ಸಿರಿಯನ್ನು ಸೂರೆಗೈದಿದ್ದೀರಿ ನಿಮ್ಮ ಕವನ ಸಂಗ್ರಹದ ಶೀರ್ಷಿಕೆ ಈ ಅರ್ಥದಲ್ಲಿ ಸಾಂಕೇತಿಕವಾಗಿಯೂ ಇದೆ. ಅದರ ಹಿಂದಿಯೇ ಬಿಡಿಹರಳು ಎಂಬ ಹನಿಗವನಗಳ ಸಂಗ್ರಹ(2002) ದಲ್ಲಿ ವಿಸ್ತರಿಸಿಕೊಂಡ ಅವರ ಕಾವ್ಯ ಪ್ರತಿಭೆ ಮತ್ತೆ ಇಹದ ಸ್ವರ ಎಂಬ ಪ್ರಸ್ತುತ ಕವಿತೆಗಳಲ್ಲಿ ಬೇರೊಂದು ಹದವನ್ನು ಪಡೆದುಕೊಂಡಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಲ್ಲದೇ ಕೇವಲ ಒಂದೂವರೆ ವರ್ಷದ ಕಾಲಮಾನದಲ್ಲಿ ಮುಂಗಾರಿನ ಮಳೆಗೆ ತುಂಬಿ-ತುಳುಕಿ ಕೋಡಿಬಿದ್ದ ಕೆರೆಯಂತೆ, ಲಲಿತಾ ಸಿದ್ಧಬಸವಯ್ಯನವರ ಕಾವ್ಯ ಸಾಮರ್ಥ್ಯ ಈ ಬಗೆಯ ಸಮೃದ್ಧಿಯನ್ನು ಪಡೆದುಕೊಂಡದ್ದು ಆಶ್ಚರ್ಯದ ಮತ್ತು ಸಂತೋಷದ ಘಟನೆಯಾಗಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

About the Author

ಲಲಿತಾ ಸಿದ್ದಬಸವಯ್ಯ
(27 February 1955)

ಕವಯತ್ರಿ ಲಲಿತಾ ಸಿದ್ದಬಸವಯ್ಯ ಅವರು  ಬಿ.ಎಸ್ಸಿ. ಪದವೀಧರೆ. 27-02-1955 ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಯ್ಯ, ತಾಯಿ ಪುಟ್ಟಮ್ಮಣ್ಣಿ. ‘ಮೊದಲ ಸಿರಿ, ಇಹದ ಸ್ವರ, ಬಿಡಿಹರಳು (ಹನಿಗವನಗಳು), ಕಬ್ಬಿನೆಲ, ದಾರಿನೆಂಟ, ಇನ್ನೊಂದು ಸಭಾಪರ್ವ’ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ‘ಮಿ. ಛತ್ರಪತಿ ಆನೆಘಟ್ಟ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಬಿ.ಎಂ.ಶ್ರೀ. ಕಾವ್ಯ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಮಾಣಿಕಬಾಯಿ ಕಾವ್ಯ ಪ್ರಶಸ್ತಿ, ಕಾವ್ಯಾನಂದ ಮುಂಬೈ ಹೊರನಾಡು ಪ್ರಶಸ್ತಿ, ಅಂಜೂರ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ’ ಲಭಿಸಿವೆ.  ...

READ MORE

Related Books