ಲೇಖಕ ಡಾ. ಎಸ್.ಎಸ್. ಗುಬ್ಬಿ ಅವರ ಕವನ ಸಂಕಲನ-ಗುಬ್ಬಿ ಗೂಡು.ಕವಿತೆಗಳು ವಿಶೇಷವಾಗಿ ಮಾನವೀಯ ಮೌಲ್ಯಗಳು ಹಾಗೂ ಪ್ರತಿಪಾದನೆಯ ಆಶಯದಲ್ಲಿ ರಚನೆಯಾಗಿದೆ. ನಾಡು, ದೇಶ,ಭೂಮಿ, ಪರಿಸರ, ಜೀವನದಿಗಳು, ದೇಶಪ್ರೇಮ, ಸೈನಿಕರ ಜೀವನ ಹೀಗೆ ಹಲವು ವಸ್ತುಗಳನ್ನು ಒಳಗೊಂಡ ಕವಿತೆಗಳಿವೆ. ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ ಎನ್ನುವಂತೆ ತಾಯಿನಾಡಿನ ಬಗೆಗಿನ ಅಭಿಮಾನ ಈ ಕವಿತೆಗಳಲ್ಲಿ ವ್ಯಕ್ತವಾಗಿದೆ.
ನದಿ ಜೋಡಣೆ ಅಂತ ಹೊಸ ಕ್ರಮಗಳನ್ನು ತುಂಬು ಹೃದಯದಿಂದ ಕವಿ ಸ್ವಾಗತಿಸುತ್ತಾರೆ. ನದಿಜೋಡಣೆ ನಮ್ಮ ದೇಶದ ಕುಡಿಯುವ ನೀರಿನ ಹಾಗೂ ಕೃಷಿಯ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ ಎಂಬ ಸದಾಶಯದ ಕವನಗಳೂ ಇವೆ. ನದಿಗಳು ಬತ್ತಿ ನೀರಿಗಾಗಿ ಹಾಹಾಕಾರ ಉಂಟಾದಾಗ ಅಂತರ್ಜಲಕ್ಕೆ ಕನ್ನ ಹಾಕಿ ಅನೇಕ ಕೊಳವೆ ಬಾವಿಗಳನ್ನು ಕೊರೆಯಿಸಿದರೂ ಅಂತರ್ಜಲ ಕೂಡ ಬರಿದಾಗುತ್ತಾ ಬಂದಿರುವ ವಿಪರ್ಯಾಸವನ್ನು ಎದುರಿಸುತ್ತಿದ್ದೇವೆ. ನೀರು ಜೀವದ ಜೀವದ ಉಗಮ ಸ್ಥಾನ. ಗಂಗೆ ಎಂದು ಪೂಜಿಸುವ ಭಾವನೆ ಒಂದೆಡೆ ಆದರೆ ಜಲದ ಕಣ್ಣುಗಳನ್ನು ಗಾಯಗೊಳಿಸಿದ ಮನುಕುಲ ಅಲ್ಲಿಂದ ರಕ್ತ ಒಸರುವಿಕೆ ಕಾರಣವಾಗಿದೆ. ಇದರಿಂದ ಜೀವನದ ಅತ್ಯಾವಶ್ಯಕ ನೀರನ್ನು ಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಈ ವಿದ್ಯಮಾನವು ಕವಿಯ ಮನ ಕಲುಕಿದೆ. ಅದು ಅನೇಕ ಕವಿತೆಯ ರಚನೆಗೆ ಪ್ರೇರಣೆಯಾಗಿದೆ. ಭೂಮಿ, ಪ್ರಳಯ,ನೀರು,ಪ್ರಕೃತಿ, ವಿಕೋಪ, ಅರಣ್ಯರೋದನ,ಮರಗಳ ಕೊಲೆ, ಹೀಗೆ ಅನೇಕ ಕವಿತೆಗಳಲ್ಲಿ ನಿಸರ್ಗದ ಮೇಲಾಗುತ್ತಿರುವ ದೌರ್ಜನ್ಯದ ಖಂಡನೆ ಇದೆ. ಆ ದೌರ್ಜನ್ಯದ ಪರಿಣಾಮವೇ ಇದೆಲ್ಲಕ್ಕೂ ಕಾರಣ ಎಂಬುದನ್ನು ಮನವರಿಕೆ ಮಾಡಿಕೊಡಲು ಕವಿ ಯತ್ನಿಸಿದ್ದಾರೆ.
ಇನ್ನೂ ಕೆಲವು ಕವಿತೆಗಳಲ್ಲಿ ದೇವರು-ಧರ್ಮ, ಮಠ,ಸಂಸ್ಕಾರ, ಹೀಗೆ ಹಲವು ವಿಷಯಗಳನ್ನು ಒಳಗೊಂಡಿದೆ. ಕೋಮು ಗಲಭೆಗಳು ದೇಶವನ್ನು ವಿಚಿತ್ರಗೊಳಿಸುವ ಈ ಸಂದರ್ಭ ಇಲ್ಲಿ ಬದುಕುವ ವಿಭಿನ್ನ ಸಮುದಾಯಗಳು ಪರಸ್ಪರರಲ್ಲಿ ನಂಬಿಕೆ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಧರ್ಮವನ್ನು ಮಾನವೀಯ ನೆಲೆಯಲ್ಲಿ ನಿರ್ವಹಿಸಿದ್ದಾರೆ. ಮಾನವತೆಯೇ ಎಲ್ಲಕ್ಕಿಂತ ಮಿಗಿಲಾದ ಧರ್ಮ ಎನ್ನುವ ಕವಿ, ಧರ್ಮಗಳು ಹಲವಾದರೂ ಅವೆಲ್ಲ ಒಂದು ದೇಹದ ಅನಿವಾರ್ಯ ಅಂಗಗಳು ಎಂದು ಹೇಳುತ್ತಾರೆ. ಒಂದು ಕಾಲದಲ್ಲಿ ಮಠಗಳು ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದವು ಜನರನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುತ್ತಿದ್ದವು. ಎಂಬುದು 'ಮಠಗಳಿದ್ದವೂ ಅಂದು ಸಲಹೆಗಾಗಿ' ಕವಿತೆ ನಿರೂಪಿಸುತ್ತದೆ. ಜೊತೆಗೆ ಶರಣ ಚಳವಳಿ ಕವಿ ಮನಸ್ಸನ್ನು ಆಕರ್ಷಿಸಿದೆ. ಶರಣ ಚಳವಳಿಯ ಜೀವನದ ಧೋರಣೆ ದುಡಿಮೆಗೆ ಕೊಟ್ಟ ಗೌರವ,ಸಮಾನತೆಯ ಆಶಯ ಇವೆಲ್ಲ ಇಂದಿಗೂ ಎಂದೆಂದಿಗೂ ಮನುಕುಲಕ್ಕೆ ಸ್ಪೂರ್ತಿದಾಯಕ ಎನ್ನುವುದು ಕವಿಯ ಪ್ರಮುಖ ಆಶಯವಾಗಿದೆ.
ಲೇಖಕ ಡಾ. ಎಸ್.ಎಸ್. ಗುಬ್ಬಿ (ಸಿದ್ಧಬಸಯ್ಯ ಶಿವಶಂಕರಯ್ಯ ಗುಬ್ಬಿ) ಬಿ.ಎಸ್.ಸಿ, ಎಂಬಿಬಿಎಸ್ ಹಾಗೂ ಎಂ.ಎಸ್. (ಆರ್ಥೋಪೆಡಿಕ್) ಪದವೀಧರರು. ಕಬುರಗಿಯ ಎಂ.ಎನ್. ಆರ್. ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ವೃತ್ತಿ ಆರಂಭಿಸಿ ನಂತರ ತೆಲಂಗಾಣ ರಾಜ್ಯದ ಸಂಗಾರೆಡ್ಡಿಯ ಎಂ.ಎಸ್.ಆರ್ ವೈದ್ಯಕೀಯ ಕಾಲೇಜಿನಲ್ಲಿ , ಪುನಃ ಅವರು ಕಲಬುರಗಿಯ ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ಕನ್ಸ್ ಲ್ಟಂಟ್ ಆಗಿ ಸೇವೆ ಸಲ್ಲಿಸಿದರು. ಕಲಬುರಗಿಯ ಜಿಮ್ಸ್ ನಲ್ಲಿ ಆರ್ಥೋಪೆಡಿಕ್ ವಿಭಾಗದ ಪ್ರೊಫೆಸರ್ ..ಹೀಗೆ ವೈದ್ಯಕೀಯ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಬೆನ್ನು, ನರರೋಗ ಚಿಕಿತ್ಸೆ, ಮೂಳೆ ಮುರಿತ ಇತ್ಯಾದಿ ಕ್ಷೇತ್ರದಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ. ಡಾ. ಸ.ಜ. ನಾಗಲೋಟಿಮಠ ಅವರ ಅಭಿನಂದನಾ ಗ್ರಂಥ ...
READ MORE