ಜಾತಿಪದ್ಧತಿ, ಲಿಂಗ ತಾರತಮ್ಯ, ಊಳಿಗಮಾನ್ಯ ಪದ್ಧತಿಗಳು ರೂಪಿಸಿದ ಕ್ರೂರ ವ್ಯವಸ್ಥೆಯ ವಿವಿಧ ಸ್ತರಗಳಿಂದ ಬಂದಿರುವ ಈ ತಲೆಮಾರಿನ ತರುಣರು, ಈ ವ್ಯವಸ್ಥೆಯ ಕರಾಳ ಮುಖಗಳನ್ನು ಕಂಡು ರೊಚ್ಚಿಗೇಳುವುದು ಸಹಜವಾದದ್ದೆ, ಮನುಷ್ಯರ ಸಮಾನತೆಯನ್ನು ಅಪೇಕ್ಷಿಸುವವರು ಈ ತಾರತಮ್ಯಗಳನ್ನು ಧಿಕ್ಕರಿಸುತ್ತ ತಮ್ಮ ನೋವಿಗೆ ದನಿಯನ್ನು ಕೊಡುತ್ತಾರೆ. ವೀರಣ್ಣ ಮಡಿವಾಳರ ಕವಿತೆಗಳು ಇಂತಹ ಕ್ರೂರ ಪದ್ಧತಿಯ ವಿರುದ್ದ ಪ್ರಶ್ನೆ ಎತ್ತುತ್ತವೆ.
ವೀರಣ್ಣ ಮಡಿವಾಳ ಅವರು ಸೆಪ್ಟೆಂಬರ್ 01, 1983ರಂದು ಜನಿಸಿದರು. ಕಲಿವಾಳ, ಕಲಕೇರಿ, ಸಿರಿಗೆರೆ, ಮುಂಡರಗಿ, ಕೊಪ್ಪಳ ಮತ್ತು ಗುಲ್ಬರ್ಗದಲ್ಲಿ ವಿದ್ಯಾಭ್ಯಾಸ. 2007 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸವಣೂರು ತಾಲ್ಲೂಕಿನ ಮೆಳ್ಳಾಗಟ್ಟಿ ಪ್ಲಾಟ್ ನಲ್ಲಿ ಸೇವೆ ಆರಂಭ. ಸದ್ಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಾವಡ್ಯಾನವಾಡಿಯಲ್ಲಿ ವೃತ್ತಿ. ಗುಲ್ಬರ್ಗಾದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರಥಮ ರ್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2010ರಲ್ಲಿ 'ನೆಲದ ಕರುಣೆಯ ದನಿ' ಕವನ ಸಂಕಲನ ಮತ್ತು ಆಡಿಯೋ ಬುಕ್ ಪ್ರಕಟವಾಗಿದೆ. ಚಿತ್ರ ಮತ್ತು ಫೊಟೋಗ್ರಫಿಯಲ್ಲೂ ಕವಿತೆಯನ್ನೇ ಹುಡುಕುತ್ತಿರುವ ವೀರಣ್ಣ 2013 ...
READ MOREಕೇಂದ್ರ ಸಾಹಿತ್ಯ ಅಕಾಡೆಮಿ, ಯುವ ಪುರಸ್ಕಾರ (2011)