ಶ್ರೀಧರ ಬನವಾಸಿ ಅವರ ಮೊದಲ ಕವನ ಸಂಕಲನ. ಅಮ್ಮನ ಆಟೋಗ್ರಾಫ್, ದೇವರ ಜೋಳಿಗೆ , ಬ್ರಿಟಿಷ್ ಬಂಗ್ಲೆ ಕಥಾ ಸಂಕಲನ ಮತ್ತು ಬೇರು ಕಾದಂಬರಿ ಪ್ರಕಟಿಸಿರುವ ’ಫಕೀರಾ’ ಅವರು ಕವಿತೆಗಳಲ್ಲಿ ತಮ್ಮ ಹುಡುಕಾಟ ನಡೆಸಿದ್ದಾರೆ. ಬಹುತೇಕ ಎಲ್ಲರಂತೆ ಕವಿತೆಯ ಮೂಲಕವೇ ಸಾಹಿತ್ಯ ಯಾನ ಆರಂಭಿಸಿದ ಶ್ರೀಧರ ಅವರು ಮೊದಲಿಗೆ ಪ್ರಕಟಿಸಿದ್ದು ಮಾತ್ರ ಗದ್ಯ ಬರಹಗಳನ್ನು. ಈ ಸಂಕಲನದ ಕವಿತೆಗಳ ಜೊತೆಯಲ್ಲಿಯೇ ಶ್ರೀಧರ ಅವರೇ ರಚಿಸಿದ ರೇಖಾಚಿತ್ರಗಳಿವೆ. ಕಲ್ಪನೆಗಿಂತ ವಾಸ್ತವ ಜಗತ್ತಿನ ಅಂತಃಸತ್ವವನ್ನು ಹುಡುಕುವ ಪ್ರಯತ್ನ ’ತಿಗರಿಯ ಹೂಗಳು’ ಸಂಕಲನದಲ್ಲಿ ಕಾಣಬಹುದು. ಈ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ. ಡಿ.ಸಿ. ಅನಂತಸ್ವಾಮಿ ದತ್ತಿ ಪ್ರಶಸ್ತಿ ದೊರೆತಿದೆ.
'ಫಕೀರ’ ಎಂಬ ಅಂಕಿತದಲ್ಲಿ ಬರೆಯುವ ಶ್ರೀಧರ ಬನವಾಸಿ ಅವರು ಕತೆ-ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ 1985 ಫೆಬ್ರುವರಿ 6 ರಂದು ಜನಿಸಿದರು. ಬನವಾಸಿ ಉಜಿರೆ ಹಾಗೂ ದಾವಣಗೆರೆಯಲ್ಲಿ ಶಿಕ್ಷಣಾಭ್ಯಾಸ ಪೂರ್ಣಗೊಳಿಸಿ ಮೆಕ್ಯಾನಿಕಲ್ ಎಂಜನಿಯರಿಂಗ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಅಧ್ಯಯನ ಮಾಡಿದ್ದಾರೆ. ಕಾಲೇಜು ದಿನಗಳಿಂದಲೇ ಕತೆ, ಕಾವ್ಯ, ಅಂಕಣ ಬರಹಗಳಲ್ಲಿ ಆಸಕ್ತಿ ಇರುವ ಅವರು ‘ಅಮ್ಮನ ಆಟ್ರೋಗ್ರಾಫ್’, ’ದೇವರ ಜೋಳಿಗೆ’, ’ಬ್ರಿಟಿಷ್ ಬಂಗ್ಲೆ’, ‘ಬೇರು’ ಪುಸ್ತಕಗಳ ಮೂಲಕ ಕನ್ನಡ ಕಥಾಕ್ಷೇತ್ರದಲ್ಲಿ ಮಹತ್ವದ ಕಥೆಗಾರರಾಗಿ ಶ್ರೀಧರ ಬನವಾಸಿ ಗುರುತಿಸಿಕೊಂಡಿದ್ದಾರೆ. ಶ್ರೀಧರ್ ಅವರು ಹಲವು ವರ್ಷಗಳ ಕಾಲ ಮಾಧ್ಯಮ ಮತ್ತು ...
READ MOREಪ್ರೊ. ಡಿ.ಸಿ. ಅನಂತಸ್ವಾಮಿ ಪ್ರಶಸ್ತಿ