ಡಾ. ವಿ. ಮುನಿವೆಂಕಟಪ್ಪನವರ ಆಯ್ದ ಕವಿತೆಗಳು

Author : ವಿ. ಮುನಿವೆಂಕಟಪ್ಪ

Pages 128

₹ 75.00




Year of Publication: 2011
Published by: ವಾಣಿ ಪ್ರಕಾಶನ
Address: # 2542, 1ನೇ ಮಹಡಿ, ಹೆಬ್ಬಾಳ್, 2ನೇ ಹಂತ, ರೇಣುಕಾ ಯಲ್ಲಮ್ಮ ದೇವಸ್ಥಾನ ಸಮೀಪ, ಮೈಸೂರು-570017

Synopsys

ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಆಯ್ದ ಕವಿತೆಗಳ ಸಂಗ್ರಹ ಕೃತಿ- ಡಾ. ವಿ. ಮುನಿವೆಂಕಟಪ್ಪನವರ ಆಯ್ದ ಕವಿತೆಗಳು. ಡಾ. ಮುನಿಯಪ್ಪ ಅವರ ಕೃತಿಗೆ ಮುನ್ನುಡಿ ಬರೆದು ‘ಸಾಮಾಜಿಕ ವ್ಯವಸ್ಥೆಯ ಕರಾಳ ಮುಖವನ್ನು ಅನಾವರಣಗೊಳಿಸುತ್ತಾ, ಈ ವ್ಯವಸ್ಥೆ ಬಗ್ಗೆ ಚಿಂತನೆ ಮಾಡಲು ಪ್ರೇರೇಪಿಸುತ್ತವೆ ಇಲ್ಲಿಯ ಕವಿತೆಗಳು. ಚರಿತ್ರೆ ಹಾಗೂ ಪುರಾಣಗಳ ನೆಲೆಯಲ್ಲೂ, ವ್ಯಕ್ತಿ ಹಾಗೂ ಸಾಮಾಜಿಕ ನೆಲೆಯಲ್ಲೂ , ಆದರ್ಶ ಹಾಗೂ ವಾಸ್ತವದ ನೆಲೆಯಲ್ಲೂ ಇಲ್ಲಿಯ ಕವಿತೆಗಳು ಮುಖ್ಯವಾಗುತ್ತಿವೆ. ವಿಶೇಷತೆ ಎಂದರೆ ಸಮಾಜವನ್ನು ವಿವಿಧ ಆಯಾಮಗಳಿಂದ, ವಿಭಿನ್ನ ದೃಷ್ಟಿಕೋನಗಳಿಂದ ನೋಡುವ ಕುತೂಹಲ ಕವಿತೆಗಳ ವಿಶೇಷತೆಯೂ ಆಗಿವೆ.’ ಎಂದು ಪ್ರಶಂಸಿಸಿದ್ದಾರೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books