‘ಹಸಿದ ಸೂರ್ಯ’ ಕೃತಿಯು ಜಯಶ್ರೀ ಸಿ. ಕಂಬಾರ ಅವರ ಕವನಸಂಕಲನ. ಕೃತಿಗೆ ಬೆನ್ನುಡಿ ಬರೆದಿರುವ ಎಂ.ಎಸ್. ಆಶಾದೇವಿ ಅವರು, `ಇಲ್ಲಿ ಪ್ರಧಾನವಾಗಿ ಗುರುತಿಸಕೊಳ್ಳಬೇಕೆಂಬುವ ಅಂಶ ಎಂದರೆ, ತನ್ನ ಕಣ್ಣೆದುರಿಗೆ ಇರುವಂತಹ ಐಕಾನ್ ಅನ್ನು ಹಿಂಬಾಲಿಸುವುದು. ಇದರಿಂದ ಕೆಲವು ಅನುಕೂಲಗಳನ್ನು ಪಡೆಯಬಹುದು ಎನ್ನುವುದನ್ನು ಲೇಖಕಿ ಇಲ್ಲಿ ವಿಶ್ಲೇಷಿಸಿದ್ದಾರೆ. ಹಾಗೆಯೇ, ಅನುಕೂಲಗಳ ಅಂಶವನ್ನು ಗೆಲ್ಲುವುದು ಸುಲಭವಲ್ಲ ಅನ್ನುವಂತಹ ವಿಚಾರವನ್ನು ಕೂಡ ಅವರು ಇಲ್ಲಿ ಪ್ರಸ್ತುತಪಡಿಸುತ್ತಾರೆ. ಇಲ್ಲಿ ಜಯಶ್ರೀ ಪ್ರಜ್ಞಾಪೂರ್ವಕವಾಗಿಯೇ ಕಷ್ಟದ ದಾರಿಯನ್ನು ಆರಿಸಿಕೊಂಡಿದ್ದಾರೆ ಎನ್ನುವುದು ತಿಳಿದುಬರುತ್ತದೆ. ತಮ್ಮ ನಾಟಕಗಳಲ್ಲಿ ಚಂದ್ರಶೇಖರ ಕಂಬಾರರು ಪರಂಪರೆಯನ್ನು ಅಪರಂಜಿಯನ್ನು ಸೋಸುವ ಪ್ರಕ್ರಿಯೆಯಾಗಿ ಕಾಣುತ್ತಾರೆ. ಇಡೀ ಭಾರತದ ಚಲನೆಯನ್ನು ಎದುರು ಈಜಿನಿಂದ ಕಾಣುವ ಮಹಾ ಪ್ರಯಾಣ ಈ ಕೃತಿಯಾಗಿದೆ’ ಎಂದಿದ್ದಾರೆ. .
ಕವಯತ್ರಿ ಜಯಶ್ರೀ ಸಿ. ಕಂಬಾರ ಅವರು ಬೆಂಗಳೂರಿನಲ್ಲಿ ವಾಸವಿದ್ದಾರೆ. ‘ಇಂಗ್ಲಿಷ್ ಮತ್ತು ಕನ್ನಡ ನಾಟಕಗಳಲ್ಲಿ ಇತಿಹಾಸ’ ವಿಷಯವಾಗಿ ಪಿ.ಹೆಚ್.ಡಿ ಪದವೀಧರರು. ವಿವಿಧ ಕಾರ್ಯಕ್ರಮಗಳಿಗೆ ಸಂಪನ್ಲೂಲ ವ್ಯಕ್ತಿಯಾಗಿದ್ದಾರೆ. ಪ್ರಸ್ತುತ ರಾಜಾಜಿನಗರದಲ್ಲಿಯ ಕೆ.ಎಲ್.ಇ ಸೊಸೈಟಿಯ ನಿಜಲಿಂಗಪ್ಪ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಕೃತಿಗಳು: ಹೊಸದಾರಿ (ನಾಟಕ) ಹಸಿದ ಸೂರ್ಯ (ಕವನ ಸಂಕಲನ) ಪ್ರಶಸ್ತಿ-ಪುರಸ್ಕಾರಗಳು: ಕನ್ನಡ ಸೇವಾ ರತ್ನ ಪ್ರಶಸ್ತಿ, ಇಂದಿರಾ ವಾಣಿ ರಾವ್ ಪ್ರಶಸ್ತಿ, ಸ್ನೇಹ ಸೇತು ಪ್ರಶಸ್ತಿಗಳು ಲಭಿಸಿವೆ. ...
READ MORE