ಕನಸಿನ ಕವನಾಮೃತ ಕವನ ಸಂಕಲನವನ್ನು ಲೇಖಕ ಪುತ್ತೂರು ಉಮೇಶ್ ನಾಯಕ್ ಅವರು ರಚಿಸಿದ್ದಾರೆ. ಬರೆಯಬೇಕೆಂದರೆ ಕಾಣಬೇಕು ಮತ್ತು ಕಾಣಿಸದಿರುವುದು ಹೊಳೆಯಬೇಕು. ಒಳಬೇಗುದಿಯ ಕಾವು ತಣ್ಣನೆ ಕವಿತೆಯಾಗಿ ಹಿತವಾಗುವ ಭಾವಸ್ಥಿತಿ ಸಾಧ್ಯವಾಗುವುದು ಥಟ್ಟನೆ ಅಲ್ಲ. ಅದು ಚೊಚ್ಚಲ ಹೆಜ್ಜೆಯಿಂದ ಮತ್ತು ನಿರಂತರ. ಮೊದಲ ಹೆಜ್ಜೆಯಲ್ಲಿ ನಾಟ್ಯ ಮುದ್ರಿಕೆ ಹುಡುಕಬಾರದು. ಮಗು ಬೆಳೆಯಲಿ, ಕಲಿಯಲಿ, ಮನುಜನಾಗಲಿ, ಹೊಸ ಹಾದಿಯಲ್ಲಿ ಹೊರಟ ಉಮೇಶ್ ನಾಯಕರಿಗೆ ಶುಭಹಾರೈಕೆಗಳು ಎಂದು ಕೃತಿಯ ಬೆನ್ನುಡಿಯಲ್ಲಿ ಹೇಳಲಾಗಿದೆ.
ಕವಿ, ಲೇಖಕ ಪುತ್ತೂರು ಉಮೇಶ್ ನಾಯಕ್ ಅವರು ಮೂಲತಃ ಪುತ್ತೂರಿನ ದರ್ಬೆಯವರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದಿರುವ ಇವರು ಪ್ರಸ್ತುತ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಜೊತೆಗೆ ಶ್ರೀರಾಮ್ ಶೇರ್ ಅಂಡ್ ಫೈನಾನ್ಸಿಯಲ್ ಕನ್ಸಲ್ಟೆಂಟ್ ಎಂಬ ಶೇರು ಉದ್ಯಮವನ್ನು ನಡೆಸುತ್ತಿರುವ ಇವರು ಪುತ್ತೂರು ತಾಲೂಕು ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡ ಇವರು ವಿವೇಕಾನಂದ IAS ಅಧ್ಯಯನ ಕೇಂದ್ರದ ಸಂಚಾಲಕರಾಗಿ, ರೋಟರಿ ಚೈಲ್ಡ್ ಡೆವಲಪ್ಮೆಂಟ್ ಸೆಂಟರ್- ಬುದ್ಧಿಮಾಂದ್ಯ ಮಕ್ಕಳ ...
READ MORE