ಲೇಖಕ ಡಾ ಶ್ರೀ ರಾಮ ಇಟ್ಟಣ್ಣವರ ಅವರ ಕವನ ಸಂಕಲನ-ʼಹೊಳಿಸಾಲ ಬಳ್ಳಿʼ. ಹೊಳಿಸಾಲ ಬಳ್ಳಿ ಕವನ ಸಂಕಲನದ ಮುಖಾಂತರ ಇಟ್ಟಣ್ಣವರು ಸಾಹಿತ್ಯಲೋಕ ಪ್ರವೇಶಿಸಿದರು. ಗ್ರಾಮೀಣ ಪ್ರದೇಶದ ಹಸಿ ಹಸಿ ಭಾವಗಳನ್ನು ಆಮದು ಮಡಿಕೊಂಡು ಕಾವ್ಯ ಕಟ್ಟಿದ ರೀತಿ ಇಲ್ಲಿದೆ. ವಿಶೇಷವಾಗಿ ಪ್ರೇಮ ಗೀತೆಗಳಿಂದ ತುಂಬಿರುವ ಈ ಸಂಕಲನ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಗರ್ಭೀಕರಿಸಿಕೊಂಡಿದೆ. ಲೇಖಕ ಶಾಮಸುಂದರ ಬಿದರಕುಂದಿ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಜನಪದ ನುಡಿಗಟ್ಟಿನಲ್ಲಿ ತಮ್ಮ ಅನುಭವ ಅನಿಸಿಕೆಗಳನ್ನು ಹದವಾಗಿ ಹೆಣೆಯಬಲ್ಲ ಮುದವಾಗಿ ಮುಟ್ಟಿಸಬಲ್ಲ ಕವಿಯಾಗಿದ್ಧಾರೆ. ಜನಸಾಮಾನ್ಯರು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲ ʼಹೊಳಿಸಾಲ ಬಳ್ಳಿʼ ಕವನ ಸಂಕಲನದಲ್ಲಿ ಹಳ್ಳಿಗನ ಮುಗ್ಧ ತಿಳಿವಳಿಕೆ, ಗಂಭೀರ ವ್ಯಾವಹಾರಿಕತೆ, ನೈಸರ್ಗಿಕ ಸಹಜತೆಗಳಿಂದಲೇ ಇಡೀ ಜೀವನವನ್ನು ಕಂಡುಕೊಂಡ ಅನುರಕ್ತಿಯ ಮಾತುಗಳನ್ನ ಹದವಾಗಿ ಪೋಣಿಸಲಾಗಿದೆ. ನಗರದ ಬಯಕೆ, ಬಡಿವಾರವನ್ನೂ ಅಪ್ಪಿತಪ್ಪಿಯೂ ಅವರು ಒಪ್ಪಿಕೊಳ್ಳದಿರುವುದೇ ಈ ಕವನ ಸಂಕಲನದ ಗುಟ್ಟಾಗಿದೆ’ ಎಂದು ಪ್ರಶಂಸಿಸಿದ್ದಾರೆ.
ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ), ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ) ತಟ್ಟಿ ಚಿನ್ನ-ಸಣ್ಣಾಟ; ...
READ MORE