`ನಿನ್ನೇ ಬಯಸಿದೆ’ ಕೃತಿ ಬಿ.ಎಸ್ ಲಲಿತ್ ಕುಮಾರ್ ಅವರ ಕವನಸಂಕಲನವಾಗಿದೆ. ಇಲ್ಲಿ 100 ಕ್ಕೂ ಹೆಚ್ಚು ಕವನಗಳ ಸಂಗ್ರಹವಿದೆ. ಈ ಪುಸ್ತಕವು ಪ್ರೀತಿ ಮತ್ತು ಹಾತೊರೆಯುವಿಕೆ, ನಿರೀಕ್ಷೆ, ಕೋಪ, ನೋವು, ದುಃಖ, ಪ್ರಾರ್ಥನೆಗಳು ಮತ್ತು ಭರವಸೆಗಳು, ಸಂತೋಷ ಮತ್ತು ಭಯ, ದುಃಖ ಮತ್ತು ನಷ್ಟ, ಹೃದಯಾಘಾತ, ದುರಂತ ಕುರಿತು ಮಾತನಾಡುತ್ತದೆ. ಕವಿಯ ಚಿಂತನಶೀಲ ಪದಗಳ ಆಯ್ಕೆ ಮತ್ತು ಅಪರೂಪದ ಪದಗಳ ಆಕರ್ಷಣೆ ಕವನಗಳನ್ನು ಸುಂದರವಾಗಿ ರೂಪಸಿದ್ದಲ್ಲದೇ, ಓದುಗರನ್ನು ತನ್ನ ತೆಕ್ಕೆಯೆಡೆಗೆ ಆಕರ್ಷಿಸುತ್ತದೆ.
ಲಲಿತ್ ಕುಮಾರ್ ಮೂಲತಃ ಬೆಂಗಳೂರಿನವರು. ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಪ್ರವೃತ್ತಿಯಲ್ಲಿ ಕವಿ, ಲೇಖಕ. 1999ರಲ್ಲಿ ಜನನ. ಇವರು ತಮ್ಮ ಪ್ರೌಢ ಶಿಕ್ಷಣವನ್ನು ಎಸ್.ಜೆ.ಆರ್. ಕೆಂಗೇರಿ ಪಬ್ಲಿಕ್ ಸ್ಕೂಲ್ ನಲ್ಲಿ, ಸುರಾನ ದೀಕ್ಷಾ ಕಾಲೇಜಿನಲ್ಲಿ ಪದವಿ-ಪೂರ್ವ ಹಾಗೂ ಆರ್.ಎನ್.ಎಸ್. ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದಿರುತ್ತಾರೆ. ಕೃತಿಗಳು: ನಿನ್ನೇ ಬಯಸಿದೆ ...
READ MORE