ಬಿಸಿಲು ಕಾಡುವ ಪರಿ

Author : ಮೆಹಬೂಬ್ ಮಠದ

Pages 88

₹ 60.00




Year of Publication: 2019
Published by: ಅರ್ಮಾನ್‌ ಪ್ರಕಾಶನ
Address: ಕಿಲ್ಲೇದಾರ ಓಣಿ, ಅಳವಂಡಿ, ಕೊಪ್ಪಳ
Phone: 9739145088

Synopsys

’ನನ್ನದು ಶಿಶುನಾಳ ಶರೀಫನ ನೆಲ, ತುಪಾಕಿ, ತಲವಾರುಗಳು ಗಾವುದ ದೂರ’ ಎನ್ನುತ್ತಲೇ ಅಹಿಂಸೆಯ ಆಂತರಿಕ ಸತ್ಯದ ನಿರ್ವಚನ ಮಾಡಿರುವ ಯುವ ಕವಿ ಮೆಹಬೂಬ್‌. ತನ್ನ ಚೊಚ್ಚಲ ಕವನ ಸಂಕಲನ ಬಿಸಿಲ ಕಾಡುವ ಪರಿ ಕವಿತೆಗಳ ಮೂಲಕ ’ಹರಿದ ಕನಸುಗಳಿಗೆ ಪಿಸಿಯದ ಹೊಲಿಗೆ ಹಾಕುವ ಸಿಂಪಿಗನ ಸೂಜಿ ನನ್ನ ಕವಿತೆ’ ಎನ್ನುವ ಮೆಹಬೂಬ್‌ ತನ್ನ ಕವಿತೆಗಳ ಮೂಲಕ ಪ್ರೀತಿ ಹಂಚುತ್ತಾನೆ, ಸೌಹಾರ್ದತೆ ಪಸರಿಸುತ್ತಾನೆ.”ಜಾತಿ ಏಟಿಗೆ ಬ್ರಹ್ಮನೂ ಮೂರ್ಛೆಹೋದ’, ’ಈ ನೆಲದಲ್ಲಿ ಪ್ರೀತಿಯ ಶರಬತ್ತು ಹಂಚುತ್ತೇನೆ’,”ಅಲ್ಲಾ ಹು ಅಕ್ಬರ್‌ ಹೇಳಿ ಬಂದು ಗುಡಿಯೊಳಗೆ ಶಿವಭಜನೆ’ ಮಾಡಿದವನು ಎಂಬ ಬಹುತ್ವದ ಸಂಸ್ಕೃತಿ, ಮಾನವೀಯ ಕಾಳಜಿಯ ಅತ್ಯಂತಿಕ ನೆಲೆಯನ್ನು ಕವಿತೆಯ ಮುಖೇನ ಯುವ ಕವಿ ಹೇಳುತ್ತಾರೆ. ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ನಾ. ಕು. ಗಣೇಶ್ ದತ್ತಿ ಪ್ರಶಸ್ತಿ ದೊರೆತಿದೆ.

About the Author

ಮೆಹಬೂಬ್ ಮಠದ

ಯುವ ಬರಹಗಾರ ಮೆಹಬೂಬ್ ಮಠದ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದವರು. ಪ್ರಸ್ತುತ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಇವರು ಕನ್ನಡ ಸಾಹಿತ್ಯದೆಡೆಗಿನ ಒಲವುಳ್ಳವರು. ಇವರ ಚೊಚ್ಚಲ ಕೃತಿ 'ಬಿಸಿಲು ಕಾಡುವ ಪರಿ' ಕವನ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರದ 2018 ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹ ಧನ ಪಡೆದು ಪ್ರಕಟವಾಗಿದ್ದು, ಈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ 2019ನೇ ಸಾಲಿನ ನಾ.ಕು. ಗಣೇಶ ದತ್ತಿ ಪ್ರಶಸ್ತಿ ಲಭಿಸಿದ್ದು, ಇದೇ ಕೃತಿಗೆ ಬೆಳಗಾವಿಯ ಬಿ. ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ರಾಜ್ಯಮಟ್ಟದ ...

READ MORE

Related Books