ಕುವೆಂಪು ಅವರ ಎರಡನೆಯ ಸಂಕಲನ ಪಾಂಚಜನ್ಯವು 1933ರಲ್ಲಿ ಪ್ರಕಟವಾಯಿತು. ಭಾರತದ ಸ್ವಾತಂತ್ರ್ಯ ಹೋರಾಟವು ರೂಪುಗೊಂಡಿದ್ದ ದಿನಗಳಲ್ಲಿ ರಚಿತವಾದ ಕವಿತೆಗಳು ‘ಪಾಂಚಜನ್ಯ’ದಲ್ಲಿವೆ. ಹೋರಾಟ, ಪ್ರತಿಭಟನೆಯ ಧಾಟಿಯಲ್ಲಿರುವ ಬಹುತೇಕ ಕವಿತೆಗಳು ಮುನ್ನುಗ್ಗುವಂತೆ ಪ್ರೇರೇಪಣೆ ನೀಡುವಂತಿವೆ. ಮಹಾಭಾರತದಲ್ಲಿ ಪಾಂಚಜನ್ಯ ಮೊಳಗಿದ ಹಾಗೆ ಸ್ವಾತಂತ್ರ್ಯ ಹೋರಾಟದ ಪಾಂಚಜನ್ಯ ಮೊಳಗಲಿ ಎಂಬುದು ಕವಿಯ ಆಶಯ. ಒಟ್ಟು 19 ಕವಿತೆಗಳನ್ನು ಒಳಗೊಂಡಿರುವ ‘ಪಾಂಚಜನ್ಯ’ವು ಹೋರಾಟದ ಕುರಿತ ಕವಿತೆಗಳನ್ನೇ ಒಳಗೊಳಗೊಂಡಿದೆ. ಕುಮಾರವ್ಯಾಸನು ಹಾಡಿದನೆಂದರ ಕಲಿಯುಗ ದ್ವಾಪರವಾಗುವುದು.. ನಡೆ ಮುಂದೆ ನಡೆ ಮುಂದೆ.., ಕಲ್ಕಿ ಕವಿತೆಗಳು ಪಾಂಚಜನ್ಯದಲ್ಲಿವೆ.
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...
READ MORE